ನವದೆಹಲಿ : ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸುಮನ್ ದುಬೆ, ಸ್ಯಾಮ್ ಪಿತ್ರೋಡ, ಸಂಸ್ಥೆಗಳಾದ ಯAಗ್ ಇಂಡಿಯನ್, ಡೊಟೆಕ್ಸ್ ಮೆರ್ಕಂಡೈಸ್, ಡೊಟೆಕ್ಸ್ ಪ್ರವರ್ತಕ ಸುನಿಲ್ ಭಂಡಾರಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗಳನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ(ಕ್ರಿಮಿನಲ್ ಸಂಚು), 403(ಆಸ್ತಿ ಅಕ್ರಮ), 406(ಅಪರಾಧಿಕ ವಿಶ್ವಾಸಘಾತುಕಕ್ಕೆ ಶಿಕ್ಷೆ) ಮತ್ತು 420೦(ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಹೆಸರಿಸಲಾಗಿರುವವರನ್ನು ಇಡಿ ಚಾರ್ಜ್ಶೀಟ್ನಲ್ಲೂ ಆರೋಪಿಗಳೆಂದು ಹೆಸರಿಸಲಾಗಿದ್ದು, ಏಪ್ರಿಲ್ನಲ್ಲಿಯೇ ಅದನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಡಿ.16ಕ್ಕೆ ನ್ಯಾಯಾಲಯ ಇದನ್ನು ಪರಿಗಣಿಸಲಿದೆ. ಸೆಕ್ಷನ್ 66(2) ಬಳಕೆ: ಅಕ್ರಮ ವಹಿವಾಟು ನಿಯಂತ್ರಣ ಕಾಯ್ದೆಯ ಸೆಕ್ಷನ್ 66(2)ನ್ನು ಬಳಕೆ ಮಾಡಿಕೊಂಡು ಪೊಲೀಸ್ ಎಫ್ಐಆರ್ ದಾಖಲಿಸಲಾಗಿದೆ. ಇದರಿಂದಾಗಿ ಪೊಲೀಸರೂ ಪ್ರಕರಣದ ತನಿಖೆ ನಡೆಸಲು ಅನುಕೂಲವಾಗುತ್ತದೆ. ಸಾಕ್ಷಾö್ಯಧಾರಗಳನ್ನು ಹಂಚಿಕೊಳ್ಳಬಹುದು. ಪ್ರಕರಣ ಗಟ್ಟಿಯಾಗುತ್ತದೆ ಎಂದು ಇಡಿ ಮೂಲಗಳು ಹೇಳಿವೆ.


