ನವದೆಹಲಿ : ಗಲಭೆ ಮತ್ತು ಹಿಂಸಾಚಾರ ಪ್ರಕರಣಗಳಲ್ಲಿ ಆರೋಪಿಗಳ ಆಸ್ತಿಗಳನ್ನು ಇನ್ನು ಮುಂದೆ ಧ್ವಂಸ ಮಾಡದಂತೆ ನೋಡಿಕೊಳ್ಳಲು ವಿವಿಧ ರಾಜ್ಯಗಳ ಸರ್ಕಾರಕ್ಕೆ ನಿದರ್ಶನ ಕೋರಿ ಜಮಿಯತ್ ಉಲಾಮಾ ಈ ಹಿಂದೆ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ” ಸುಪ್ರೀಂಕೋರ್ಟ್, ಶೋಕಾಸ್ ನೋಟಿಸ್ ನೀಡದೆ ಮನೆಗಳನ್ನು ಧ್ವಂಸ ಮಾಡುವುದು ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಮನೆ ಹೊಂದುವುದು ಪ್ರತಿಯೊಂದು ಕುಟುAಬದ ಕನಸು, ಯಾರಿಗಾದರೂ ಆಶ್ರಯ ನೀಡುವುದಕ್ಕೆ ಅನುಮತಿಸಬೇಕೇ ಎನ್ನುವುದು ಒಂದು ಪ್ರಮುಖ ಪ್ರಶ್ನೆಯಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ನೇತೃತ್ವದ ನ್ಯಾಯಪೀಠ ಈ ಸಂಬAಧ ತೀರ್ಪು ನೀಡಿದ್ದು, ಆರೋಪಿಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ಕಾನೂನಾತ್ಮಕವಲ್ಲ.ಪ್ರಜಾ
ಪ್ರಭುತ್ವದ ಅಡಿಪಾಯವಾಗಿರುವ ಕಾನೂನು ಪ್ರಕ್ರಿಯೆ ಆರೋಪಿ ತಪ್ಪನ್ನು ಪೂರ್ವಾಗ್ರಹ ಮಾಡಬಾರದೆಂದು ತಿಳಿಸಿದೆ.
ಕಾರ್ಯಾಂಗ ನ್ಯಾಯಾಂಗದ ಕೆಲಸವನ್ನು ಮಾಡಬಾರದು. ಅಧಿಕಾರಿಗಳು ನ್ಯಾಯಾಧೀಶರಲ್ಲ, ಕಾನೂನು ಪ್ರಕ್ರಿಯೆಗೆ ಆರೋಪಿ ಹಾಗೂ ತಪ್ಪಿತಸ್ಥರೆಂದು ನಿರ್ಣಯಿಸುವ ಅಧಿಕಾರವಿಲ್ಲ ಎಂದಿರುವ ಸುಪ್ರೀA ಆರೋಪಿಗಳ ಮನೆಗಳ ನೆಲಸಮಕ್ಕೆ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಕೈಗೊಳ್ಳುತ್ತಿದ್ದ ನಿರ್ಣಯದ ವಿರುದ್ಧ ಛಾಟಿ ಬೀಸಿದೆ.
ಕಾನೂನು ನಿಯಮ ಪ್ರಜಾಸತ್ತಾತ್ಮಕ ಅಡಿಪಾಯ, ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿ ನ್ಯಾಯ ಸಮ್ಮತತೆಯನ್ನು ಪರಿಗಣಿಸಲಾಗಿದೆ ಎಂದು ಸುಪ್ರೀಂ ಎಲ್ಲ ಕಕ್ಷಿದಾರರನ್ನು ಆಲಿಸಿದ ನಂತರ ತಮ್ಮ ಅಭಿಪ್ರಾಯವನ್ನು
ವ್ಯಕ್ತಪಡಿಸಿದೆ.
ವ್ಯಕ್ತಿಗಳಿಗೆ ರಕ್ಷಣೆ ನೀಡುವ ಸಂವಿಧಾನದಡಿ ಯಲ್ಲಿರುವ ಹಕ್ಕುಗಳನ್ನು ನ್ಯಾಯಾಲಯ ಪರಿಗಣಿಸಿದೆ. ಯಾರದೇ ಆಸ್ತಿಯನ್ನು ಕಿತ್ತುಕೊಳ್ಳಲಾಗುವುದಿಲ್ಲ ಅಥವಾ ಧ್ವಂಸ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಕಾನೂನು ನಿಯಮವನ್ನು ರೂಪಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕಾರ್ಯಾಂಗದ ಕಾರ್ಯ ಮಿತಿಮೀರಿದರೆ ಕಾನೂನಿನ ಮೂಲಕ ವ್ಯವಹರಿಸಬೇಕು. ನಮ್ಮ ಸಾಂವಿಧಾನಿಕ ನೀತಿಗಳು ಯಾವುದೇ ಅಧಿಕಾರ ದುರುಪಯೋಗವನ್ನು ಅನುಮತಿಸುವುದಿಲ್ಲ ಹಾಗೂ ನ್ಯಾಯಾಲಯ
ಅಂತಹ ದುರ್ಬಳಕೆಯನ್ನು
ಬುಲ್ಡೋಜರ್ ಕಾರ್ಯಾಚರಣೆ ಕುರಿತಂತೆ ಸುಪ್ರೀಂ ನಿರ್ದೇಶನ ಆದೇಶ ಜಾರಿಯಾದ ನಂತರ ಆದೇಶವನ್ನು ಪ್ರಶ್ನಿಸಲು ನೊಂದವರಿಗೆ ಕಾಲಾವಕಾಶ ನೀಡಬೇಕು. ಮನೆ ಖಾಲಿ ಮಾಡಲು ಸಾಕಷ್ಟು ಅವಕಾಶ ಕಲ್ಪಿಸಬೇಕು.
ಶೋಕಾಸ್ ನೋಟಿಸ್ ಇಲ್ಲದೆ ಮನೆ ಕೆಡವುದಂತಹ ಕೆಲಸಗಳನ್ನು ಮಾಡಬಾರದು.ಸ್ಥಳೀಯ ಪುರಸಭೆ ಕಾನೂನುಗಳಲ್ಲಿ ನೀಡಲಾದ ಸಮಯದ ಪ್ರಕಾರ ಅಥವಾ ನೋಟಿಸ್ ನೀಡಿದ ದಿನಾಂಕದಿAದ ೧೫ ದಿನಗಳ ಒಳಗೆ ಅದಕ್ಕೆ ಉತ್ತರಿಸಬೇಕು. ಹಿಂದಿನದಿನಾAಕದ ಯಾವುದೇ ರೀತಿಯ ಆರೋಪಗಳ ಆಧಾರದ ಮೇಲೆ ಕೆಡವುವುದನ್ನು ನಿಲ್ಲಿಸಲು ಜಿಲ್ಲಾಧಿಕಾರಿಯಿಂದ ಶೋಕಾಸ್ ನೋಟಿಸ್ ಕಳುಹಿಸಲಾಗುವುದು.
ಇಂದಿನಿAದ ಒಟ್ಟು ತಿಂಗಳೊಳಗೆ ಕಟ್ಟಡಗಳ ನೆಲಸಮ ಎದುರಿಸಲು ಡಿಎಂ ನೋಡಲ್ ಅಧಿಕಾರಿ ನೇಮಕ. ಪ್ರತಿ ಸ್ಥಳೀಯ ಪ್ರಾಧಿಕಾರಿಗಳ ಸೂಚನೆಯ ವಿವರಗಳನ್ನು ಒಳಗೊಂಡಿರುವ ಡಿಜಿಟಲ್ ಪೋರ್ಟಲ್ ೩ ತಿಂಗಳೊಳಗೆ ನಿಯೋಜನೆ. ಧ್ವಂಸ ಪ್ರಕ್ರಿಯೆಗಳ ವೀಡಿಯೊ ಚಿತ್ರೀಕರಣ ಹಾಗೂ ವರದಿಯನ್ನು ಡಿಜಿಟಲ್ ಪೋರ್ಟಲ್ನಲ್ಲಿ ಪ್ರದರ್ಶಿಸುವುದು ಎಂದಿರುವ ನ್ಯಾಯಾಲಯ ಸಾರ್ವಜನಿಕ ಭೂಮಿಗಳಲ್ಲಿ ಅನಧಿಕೃತ ನಿರ್ಮಾಣ ಸ್ಥಳಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. ಉಳಿದಂತೆ ಯಾವುದೇ ನಿರ್ದೇಶನ ಉಲ್ಲಂಘನೆಯಾದರೆ ಆಸ್ತಿ ಮರು ಪಾವತಿಗೆ ಅವರೇ ಹೊಣೆಗಾರರಾಗುತ್ತಾರೆ ಎಂದು ಅಧಿಕಾರಿಗಳಿಗೆ ಸೂಚಿಸುವುದು ಹಾಗೂ
ಅದು ಅವರ ಸ್ವಂತ ವೆಚ್ಚವನ್ನು ಒಳಗೊಂಡಿರುತ್ತದೆ ಎAದು ನ್ಯಾಯಾಲಯ ತಿಳಿಸಿದೆ.


