ನವದೆಹಲಿ : ಭಾರತೀಯ ವಾಯುಪಡೆಗೆ ಬಲ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಫ್ರಾನ್ಸ್ ನಿರ್ಮಿತ 114 ರಫೇಲ್ ಯುದ್ಧ ವಿಮಾನ ಖರೀದಿಗೆ
ಸಜ್ಜಾಗಿದೆ. ಸುಮಾರು 3.25 ಲಕ್ಷ ಕೋಟಿ ರುಪಾಯಿ ಮೊತ್ತದ ಯೋಜನೆಗೆ ಈ ಹಿಂದೆ ರಕ್ಷಣಾ ಖರೀದಿ ಮಂಡಳಿಯಿAದ ಒಪ್ಪಿಗೆ ದೊರೆತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿಯ ಅನುಮತಿ ದೊರೆತ ಬಳಿಕ ಖರೀದಿಗೆ ಸಂಪೂರ್ಣ ಗ್ರೀನ್ ಸಿಗ್ನಲ್ ಸಿಗಲಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯನ್ಯುಯೆಲ್ ಮ್ಯಾಕ್ರನ್ ಈ ತಿಂಗಳ 18ರಂದು ಭಾರತಕ್ಕೆ ಬರಲಿದ್ದು, ಕೃತಕ ಬುದ್ಧಿಮತ್ತೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಪ್ರಸ್ತುತ ಒಪ್ಪಂದದಲ್ಲಿ 88 ಸಿಂಗಲ್ ಸೀಟ್ ಹಾಗೂ 26 ಡಬಲ್ ಸೀಟ್
ವಿಮಾನಗಳನ್ನು ಉತ್ಪಾದಿಸುವ ಯೋಜನೆ ಇದ್ದು, ಶೇ.80ರಷ್ಷು ವಿಮಾನಗಳು ಭಾರತದಲ್ಲಿ ತಯಾರಿಸಲಾಗುತ್ತದೆ ಇದಕ್ಕಾಗಿ ಭಾರತೀಯ ಕಂಪನಿಗಳ ಜೊತೆ ಡಸಾಲ್ಟ್ ಎವಿಯೇಶನ್ ಒಡಂಬಡಿಕೆ ಮಾಡಿಕೊಂಡಿದೆ. ಜೊತೆಗೆ ದೇಶಿಯವಾಗಿ ತಯಾರಾದ ಯವುದೇ ಶಸ್ತಾçಸ್ತಗಳನ್ನು ರಫೇಲ್ ವಿಮಾನಕ್ಕೆ ಅಳವಡಿಸಲು ಈ ಒಪ್ಪಂದ ಅವಕಾಶ ಮಾಡಿಕೊಡುತ್ತದೆ. ಭಾರತೀಯ ವಾಯುಪಡೆಯ ಸ್ಕ್ವಾಡ್ರಾನ್ ಸಂಖ್ಯೆಯನ್ನು ಈಗಿರುವ 30ರಿಂದ 42.5ಕ್ಕೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ರಫೇಲ್ ಖರೀದಿ ಒಪ್ಪಂದ ಈ ಉದ್ದೇಶಕ್ಕೆ ಬಲ ನೀಡಲಿದೆ.


