Thursday, January 15, 2026
Flats for sale
Homeದೇಶನವದೆಹಲಿ : ಬೀದಿ ನಾಯಿಗಳಿಗೆ ಉಣಿಸುವವರನ್ನೂ ನಾಯಿ ಕಚ್ಚುವ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ : ಸುಪ್ರೀಂ...

ನವದೆಹಲಿ : ಬೀದಿ ನಾಯಿಗಳಿಗೆ ಉಣಿಸುವವರನ್ನೂ ನಾಯಿ ಕಚ್ಚುವ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ : ಸುಪ್ರೀಂ ಕೋರ್ಟ್.

ನವದೆಹಲಿ : ನಾಯಿ ಕಡಿತ ತಡೆಯಲು ನಿಯಮಗಳನ್ನು ಅನುಷ್ಠಾನಗೊಳಿಸದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂಥ ಪ್ರಕರಣಗಳಲ್ಲಿ ಸರಕಾರ ಸಂತ್ರಸ್ತರಿಗೆ ಭಾರಿ ಪ್ರಮಾಣದ ಪರಿಹಾರ ನೀಡುವಂತೆ ಸೂಚಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್. ವಿ.ಅಂಜಾರಿಯಾ ಅವರ ಪೀಠ, ಬೀದಿ ನಾಯಿಗಳಿಗೆ ಉಣಿಸುವವರನ್ನೂ ನಾಯಿ ಕಚ್ಚುವ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದಿದ್ದಾರೆ.

ಪ್ರತಿಯೊAದು ನಾಯಿ ಕಡಿತದ ಪ್ರಕರಣದಲ್ಲಿ, ದೊಡ್ಡವರಿಗೇ ಆಗಲಿ ಚಿಕ್ಕವರಿಗೇ ಆಗಲಿ, ಗಾಯ ಅಥವಾ ಸಾವು ಉಂಟಾದಲ್ಲಿ ಭಾರೀ ಪರಿಹಾರಕ್ಕೆ ಸರ್ಕಾರಕ್ಕೆ ಸೂಚಿಸಬೇಕಾಗುತ್ತದೆ. ಏಕೆಂದರೆ ಅವು ಕಳೆದ 5 ವರ್ಷಗಳಿಂದ ನಿಯಮಗಳನ್ನು ಅನುಷ್ಠಾನಗೊಳಿಸಲ್ಲ. ಬೀದಿ ನಾಯಿಗಳಿಗೆ ಆಹಾರ ನೀಡುವ ವರೂ ಹೊಣೆಗಾರರಾಗುತ್ತಾರೆ. ಈ ಪ್ರಾಣಿಗಳ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಅವರು ಅದನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಲಿ. ಏಕೆ ಬೀದಿಯಲ್ಲಿ ಅಲೆದಾಡಿಕೊಂಡಿರಲು ಬಿಟ್ಟಿದ್ದಾರೆ? ಏಕೆ ಜನರನ್ನು ಕಚ್ಚುವುದಕ್ಕೆ ಬಿಟ್ಟಿದ್ದಾರೆ? ಎಂದು ನ್ಯಾ.ವಿಕ್ರಮ್‌ನಾಥ್ ಹೇಳಿದರು.

ರಸ್ತೆಗಳಲ್ಲಿರುವ ಬೀದಿ ನಾಯಿಗಳನ್ನು ಸೆರೆ ಹಿಡಿಯಬೇಕೆನ್ನುವ ಸುಪ್ರೀಂ ಕೋರ್ಟ್ನ ನ.7ರ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಒಬ್ಬ ಪ್ರತಿ ನಿಧಿಸಿದ್ದ ವಕೀಲ ವೈಭವ್ ಗಗ್ಗರ್, ತಮ್ಮ ಅರ್ಜಿದಾರರು 200 ನಾಯಿಗಳ ಆರೈಕೆ ಮಾಡುತ್ತಾರೆ ಎಂದರು. ಆಗ ನ್ಯಾಯಮೂರ್ತಿಗಳು ಬೀದಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಅಗತ್ಯ ಇದೆ ಎಂದರು.

ಬೀದಿ ನಾಯಿಗಳಿಗ ಆಹಾರ ಹಾಕುವ ಜನರಿಗೂ ಹೊಣೆ ನಿಗದಿಯ ಎಚ್ಚರಿಕೆ

ಬೀದಿ ನಾಯಿಗಳಿಗೆ ಆಹಾರ ಹಾಕುವವರೂ ನಾಯಿ ಕಡಿತದ ಪ್ರಕರಣಗಳಿಗೆ ಹೊಣೆಗಾರರಾಗುತ್ತಾರೆ ಎಂದ ನ್ಯಾಯಮೂರ್ತಿ ಮೆಹ್ತಾ, `9 ವರ್ಷದ ಮಗುವಿನ ಮೇಲೆ ನಾಯಿ ದಾಳಿ ಮಾಡಿದ್ದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ? ಅವು ಗಳಿಗೆ ಆಹಾರ ನೀಡುತ್ತಿರುವ ಸಂಸ್ಥೆಯನ್ನೇ? ಸಮಸ್ಯೆ ಕುರಿತು ನಾವು ಕಣ್ಣು ಮುಚ್ಚಿಕೊಂಡಿರಬೇಕೆAದು ನೀವು ಬಯಸುತ್ತೀರಾ?’ ಎಂದು ಪ್ರಶ್ನಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular