Sunday, March 8, 2026
Flats for sale
Homeವಿದೇಶನವದೆಹಲಿ : ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ನಿವಾಸದಲ್ಲಿಯೇ 'ಭಾರತ ರತ್ನ' ಪ್ರದಾನ ಮಾಡಿದ...

ನವದೆಹಲಿ : ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ನಿವಾಸದಲ್ಲಿಯೇ ‘ಭಾರತ ರತ್ನ’ ಪ್ರದಾನ ಮಾಡಿದ ರಾಷ್ಟ್ರಪತಿ.

ನವದೆಹಲಿ : ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿಗೆ ಭಾರತರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಆಡ್ವಾಣಿ ನಿವಾಸದಲ್ಲೇ ಪ್ರದಾನ ಮಾಡಿದರು.

ಅನಾರೋಗ್ಯಪೀಡಿತರಾಗಿರುವ ಕಾರಣ ಶನಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಹಾಜರಿರಲಿಲ್ಲ. ಪ್ರಸಕ್ತ ವರ್ಷದಲ್ಲಿ ಭಾರತರತ್ನ ಪ್ರಶಸ್ತಿ ಪಡೆದವರಲ್ಲಿ ಆಡ್ವಾಣಿ ಐದನೇಯವರಾಗಿದ್ದಾರೆ. ಉಳಿದ ನಾಲ್ವರು ಗಣ್ಯರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಹಾಗೂ ಆಡ್ವಾಣಿ ಕುಟುಂಬದ ಸದಸ್ಯರು ಹಾಜರಿದ್ದರು. ರಾಷ್ಟçಪತಿಯವರು ಆಡ್ವಾಣಿಗೆ ಪ್ರಶಸ್ತಿ ಪ್ರದಾನ ಮಾಡುವಾಗ ಅವರ ಪಕ್ಕದಲ್ಲೇ ಪ್ರಧಾನಿ ಮೋದಿ ಕುಳಿತಿದ್ದರು. ಏಳು ದಶಕಗಳ ಕಾಲ ಅವರು ದೇಶಕ್ಕೆ ಅಚಲ ಹಾಗೂ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ್ದಾರೆ. ಸಂಸದರಾಗಿದ್ದಾಗ ಸಂವಾದಕ್ಕೆ ಹೆಚ್ಚು ನೀಡುತ್ತಿದ್ದರು.ಆಡ್ವಾಣಿ (96) ಅವರು ಗೃಹಮಂತ್ರಿಯಾಗಿದ್ದಾಗ ಅಥವಾ ಉಪಪ್ರಧಾನಿಯಾಗಿದ್ದಾಗ ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟಿçÃಯ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಪಕ್ಷಭೇದ ಮರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಮಮಂದಿರ ಪುನರ್‌ನಿರ್ಮಾಣ ಹಾಗೂ ದೇಶದ ಸಾಂಸ್ಕೃತಿಕ ಪುನರುತ್ಥಾನಕ್ಕೆ ದಣಿವರಿಯದೇ ಕಾರ್ಯನಿರ್ವಹಿಸಿದ್ದಾರೆ.

1927ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದ ಅವರು 1947ರಲ್ಲಿ ಭಾರತ ವಿಭಜನೆಯಾದ ನಂತರ ಭಾರತಕ್ಕೆ ವಲಸೆ ಬಂದಿದ್ದರು. 2002ರ ಜೂನ್‌ನಿಂದ 2004ರ ಮೇ ತಿಂಗಳವರೆಗೆ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular