Thursday, September 18, 2025
Flats for sale
Homeದೇಶನವದೆಹಲಿ : ಪ್ರಧಾನಿ ನರೇಂದ್ರ ಮೋದಿ 75 ನೇ ಹುಟ್ಟುಹಬ್ಬದ ಹಿನ್ನೆಲೆ ದೇಶಾದ್ಯಂತ ವಿವಿಧ ಯೋಜನೆಗಳಿಗೆ...

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ 75 ನೇ ಹುಟ್ಟುಹಬ್ಬದ ಹಿನ್ನೆಲೆ ದೇಶಾದ್ಯಂತ ವಿವಿಧ ಯೋಜನೆಗಳಿಗೆ ಚಾಲನೆ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶಾ ದ್ಯಂತ ಸೇವಾ ಪಕ್ಷ ಯೋಜನೆ ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ 1 ಲಕ್ಷ ಆರೋಗ್ಯ ಶಿಬಿರ ಸೇರಿದಂತೆ ಹಲವು ಯೋಜನೆಗಳನ್ನೊಳಗೊಂಡ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಯೋಜನೆ ಅಡಿಯಲ್ಲಿ ಇದೇ ವೇಳೆ 23,141 ಕೋಟಿ ರೂ. ವೆಚ್ಚದ ಪಿಎಂ ಮಿತ್ರಾ ಪಾರ್ಕ್ ಉದ್ಘಾಟಿಸಿದರು. ಇನ್ನು ಬುಡಕಟ್ಟು ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ `ಆದಿ ಸೇವಾ ಪರ್ವ’ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಪಿಎಂ ಮಿತ್ರ ಪಾರ್ಕ್' ಉದ್ಘಾಟನೆ ಮಾಡಿದರು, ದೇಶಾದ್ಯಂತ ಆರೋಗ್ಯ ಕ್ಯಾಂಪ್ ಯೋಜನೆಯಡಿಸ್ವಸ್ಥನಾರಿ ಸಶಕ್ತ ಪರಿವಾರ’ಕ್ಕೆ ಚಾಲನೆ ನೀಡಿದರು.ಅಮಿತಾ ಶಾರಿಂದ 101ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಚಾಲನೆ ನೀಡಲಾಯಿತು. ದೆಹಲಿ ಸರ್ಕಾರದಿಂದ ದೆಹಲಿಯಲ್ಲಿ 7500 ಆರೋಗ್ಯ ಶಿಬಿರ ಆಯೋಜನೆ ಮಾಡಲಾಯಿತು. ಒಡಿಶಾ ಸರ್ಕಾರದಿಂದ 75 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular