ನವದೆಹಲಿ ; ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಮುಂದಿನ ಗುರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲ ಪ್ರತಿಜ್ಞೆ ಮಾಡಿದ್ದಾರೆ.
ದೇಶದಲ್ಲೂ ವಿರೋಧ ಪಕ್ಷದ ನಾಯಕರನ್ನು ಜೈಲಿನಲ್ಲಿಟ್ಟು ಚುನಾವಣೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ಖಾತೆಯನ್ನೇ ಸಂಪೂರ್ಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾಧ್ಯಮ ಸಂಸ್ಥೆಗಳನ್ನು ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿಯಾಗಿದೆ. ಯಾರಾದ್ರು ಭಯಪಡುತ್ತಿದ್ದಾರೆ ಎಂದರೆ ಅವರು ತಪ್ಪು ಮಾಡಿದ್ದಾರೆ ಅಂತ ಅರ್ಥ. ಆದರೆ ನಮಗೆ ಯಾವುದೇ ಭಯವಿಲ್ಲ ಎಂದರು.
ನಮ್ಮ ನಾಯಕರನ್ನೇ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಚಾರ್ಸೋ ಪಾರ್ ಅಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನರ ನಡುವೆ ಹೋಗಲು ಆಗಲ್ಲ. ನಮ್ಮ ರಾಹುಲ್ ಗಾಂಧಿ ಜನರ ಮಧ್ಯೆ ಹೋಗಿದ್ದಾರೆ. ಆದರೆ ಜನರ ಮಧ್ಯೆ ಹೋಗುವುದಕ್ಕೆ ಮೋದಿಗೆ ಭಯವಿದೆ ಎಂದು ವಾಗ್ದಾಳಿ ನಡೆಸಿದರು.
16 ಸದಸ್ಯರ ಪ್ರಣಾಳಿಕೆ ಸಮಿತಿ ರಚನೆ ಮಾಡಿ ಪ್ರಣಾಳಿಕೆ ತಯಾರಿಸಲಾಗಿದೆ. ಭಾರತ ಜೋಡೊ ಯಾತ್ರೆಯಲ್ಲಿ 6 ನ್ಯಾಯಗಳ ಬಗ್ಗೆ ನಾವು ಪ್ರಸ್ತಾಪ ಮಾಡಿದ್ದೇವೆ. ಅದರಂತೆ ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಯುವ ನ್ಯಾಯಕ್ಕಾಗಿ ಒಬ್ಬ ಯುವಕನಿಗೆ ಒಂದು ಲಕ್ಷ, ನಾರಿ ನ್ಯಾಯದಿಂದ ವರ್ಷಕ್ಕೆ ಒಂದು ಲಕ್ಷ ನೀಡಲಾಗುವುದು.ಕಿಸಾನ್ ನ್ಯಾಯದ ಮೂಲಕ ರೈತರ ಸಾಲಮನ್ನಾ ಮತ್ತು ಎಂಎಸ್ ಸಿ, ಗರೀಬ್ ನ್ಯಾಯದ ಮೂಲಕ ಮನರೇಗಾ ಮೂಲಕ ಕೂಲಿಯನ್ನ 400 ರೂ. ಗೆ ಏರಿಕೆ ಮಾಡಲಾಗುವುದು ಎಂದರು.


