ನವದೆಹಲಿ : ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನ ಹಿಂದೂ ಪ್ರವಾಸಿಗರನ್ನು ಭೀಕರವಾಗಿ ಹತ್ಯೆಗೈದಿದ್ದ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ರಾಷ್ಟಿçÃಯ ತನಿಖಾ ದಳ (ಎನ್ಐಎ) ರವಿವಾರ ಬಂಧಿಸಿದೆ.
ಬಟ್ಕೋಟೆಯ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಪಹಲ್ಗಾಮ್ನ ಹಿಲ್ ಪಾರ್ಕ್ನ ನಿವಾಸಿ ಬಶೀರ್ ಅಹ್ಮದ್ ಜೋಥರ್ ಎಂಬುವವರು ಮೂವರು ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದಲ್ಲಿ ಬಂಧಿತರಾದವರು. ಅಲ್ಲದೆ ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದ ಪಾಕಿಸ್ತಾನಿ ಪ್ರಜೆಗಳೆಂದು ಬAಧಿತರು ದೃಢಪಡಿಸಿರುವುದಾಗಿ ಎನ್ಐಎ ಹೇಳಿದೆ.
ಪರ್ವೈಜ್ ಮತ್ತು ಬಶೀರ್ ದಾಳಿಗೂ ಮೊದಲು ಹಿಲ್ ಪಾರ್ಕ್ನಲ್ಲಿರುವ ಗುಡಿಸಲಿನಲ್ಲಿ ಮೂವರು ಭಯೋತ್ಪಾದಕರಿಗೆ ಆಹಾರ, ಆಶ್ರಯ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರೆನ್ನಲಾಗಿದೆ. ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಸೆಕ್ಷನ್ 19ರ ಅಡಿಯಲ್ಲಿ ಈ ಇಬ್ಬರು ಆಪಾದಿತರನ್ನು ಬಂಧಿಸಿದ್ದಾರೆ. ಏ.22 ರಂದು ಪಹಲ್ಗಾಮ್ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಭಾರತೀಯ ಪ್ರವಾಸಿಗರ ನರಮೇಧ ನಡೆಸಿದ್ದರು. ಇದಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ನಡೆಸಿತ್ತು.
ನರಮೇಧ ಬಳಿಕ ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ಈವರೆಗೂ ಎರಡು ಸಾವಿರಕ್ಕೂ ಅಧಿಕ ಜನರನ್ನು ವಿಚಾರಣೆಗೊಳಪಡಿಸಿದೆ. ಅಲ್ಲದೇ ಕಾಶ್ಮೀರ, ಶೋಪಿಯಾನ್, ಕುಲ್ಗಾಮ್, ಪುಲ್ವಾಮ್ ಕುಪ್ವಾರ್ ಸೇರಿದಂತೆ 32ಕ್ಕೂ ಅಧಿಕ ಸ್ಥಳಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ದಾಳಿಕೋರರ ಪತ್ತೆಗೆ ಸರ್ಕಾರದಿಂದ 20 ಲಕ್ಷ ರೂ. ಘೋಷಿಸಿತ್ತು


