ನವದೆಹಲಿ : ಮಾಜಿ ಪ್ರಧಾನಿ ವಿಶ್ವದ ಶ್ರೇಷ್ಠ ಅರ್ಥಶಾಸ್ತçಜ್ಞ ಡಾ. ಮನಮೋಹನ್ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್ಬೋದ್ ಘಾಟ್ನಲ್ಲಿ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಗುರುವಾರ ನಿಧನರಾಗಿದ್ದ ಮನಮೋಹನ್ಸಿಂಗ್ ರವರ ಅಂತ್ಯಕ್ರಿಯೆ ಇಂದು ನಡೆದಿದ್ದು, ಈ ಮೂಲಕ ಭಾರತದ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ದಿಸೆಗಳನ್ನು ತೋರಿ ವಿಶ್ವದಲ್ಲಿ ಭಾರತ ಆರ್ಥಿಕವಾಗಿ ಬೆಳೆಯಲು ಕಾರಣರಾಗಿದ್ದ ನೇತಾರನ ಸುದೀರ್ಘ ಅಧ್ಯಯ ಕೊನೆಗೊಂಡAತಾಗಿದೆ.
ದೆಹಲಿಯ ನಿಗಮ್ ಬೋದ್ ಘಾಟ್ನಲ್ಲಿ ೨೧ ಬಾರಿ ಕುಶಾಲ ತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ದೇಶ ವಿದೇಶದ ಪ್ರಮುಖರು, ಸಾವಿರಾರು ಗಣ್ಯರ ಸಮ್ಮುಖದಲ್ಲಿ ಅಂತಿಮ ನಮನ ಸಲ್ಲಿಸುವ ಮೂಲಕ ದೇಶ ಕಂಡ ಅಪ್ರತಿಮ ನಾಯಕ ಅಜಾತ ಶತ್ರುವಿನ ಅಂತ್ಯ ಸಂಸ್ಕಾರ ನಡೆಯಿತು. ಈ ಮೂಲಕ ರಾಜಕೀಯ ಮುತ್ಸದ್ದಿಯ ಯುಗಾಂತ್ಯವಾಗಿದೆ. ಈ ಮೂಲಕ ಡಾ. ಸಿಂಗ್ ಇನ್ನೂ ಬರೀ ನೆನೆಪು ಮಾತ್ರ. ಗುರುವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದ ಉದಾರೀಕರಣದ ರೂವಾರಿ, ಆರ್ಥಿಕ ಚಿಂತಕ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರದ ದರ್ಶನ ಪಡದ ಅನೇಕ ನಾಯಕರು ಭಾವಪೂರ್ಣ ವಿದಾಯ ಹೇಳಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್ಸಿಂಗ್ ಅವರ ಪಾರ್ಥೀವ ಶರೀರವನ್ನು ದೆಹಲಿಯ ಮೋತಿಲಾಲ್ ಮಾರ್ಗದಲ್ಲಿರುವ ಮನಮೋಹನ್ಸಿಂಗ್ ಅವರ ನಿವಾಸದಿಂದ ಬಿಗಿ ಭದ್ರತೆಯೊಂದಿಗೆ ಎಐಸಿಸಿ ಕಚೇರಿಗೆ ತರಲಾಯಿತು, ಕಾಂಗ್ರೆಸ್ ಮುಖಂಡರು ಅಂತಿಮ ದರ್ಶನ ಪಡೆದ ನಂತರ ಅಲ್ಲಿಂದ ನಿಗಮಬೋದ್ ಘಾಟ್ಗೆ ಪಾರ್ಥೀವ ಶರೀರವನ್ನು ತಂದು ಸಿಖ್ ಸಂಪ್ರದಾಯದAತೆ ಅಂತಿಮ ವಿಧಿ ವಿಧಾನಗಳನ್ನು ನಡೆಸಿ ಅಂತ್ಯಕ್ರಿಯೆ
ನಡೆಸಲಾಯಿತು.
ಈ ಅಂತ್ಯಕ್ರಿಯೆಯಲ್ಲಿ ರಾಷ್ಟçಪತಿ ದ್ರೌಪದಿಮುರ್ಮು, ಉಪರಾಷ್ಟçಪತಿ ಜಗದೀಪ್ಧನ್ಕರ್, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ನಾಥ್ಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಅಧ್ಯಕ್ಷ ಓಂಬಿರ್ಲಾ,ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಪ್ರಿಯಾAಕಗಾAಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ದೆಹಲಿ ಮುಖ್ಯಮಂತ್ರಿ ಅತಿಶಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಭೂತಾನ್ ದೊರೆ ಜಿಗ್ಮ್ ಖೇಸರ್, ವಿವಿಧ ರಾಜಕೀಯ ಪಕ್ಷಗಳ ಹಲವು ಮುಖಂಡರು,ಡಾ. ಸಿಂಗ್ ಅವರ ಕುಟುಂಬಸ್ಥರು ಭಾಗಿಯಾಗಿ ಅಜಾತಶತ್ರುವಿಗೆ ಭಾವಪೂರ್ಣ ವಿದಾಯ ಹೇಳಿದರು.


