ನವದೆಹಲಿ : ತಿಂಗಳಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭಾರತ-ಚೀನಾ ನಡೆಯುವ ಮಾತುಕತೆ ಉಭಯ ದೇಶಗಳ ನಡುವೆ ಗಡಿ ಘರ್ಷಣೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎನ್ನಲಾಗಿದೆ.
ಆಗಸ್ಟ್ 31-ಸೆಪ್ಟೆಂಬರ್ 1 ರಂದು ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿ ಭಾಗದಲ್ಲಿ ಘರ್ಷಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ-ಚೀನಾ ಮುಖ್ಯಸ್ಥರ ಭೇಟಿಗೂ ಮುನ್ನ ಉಭಯ ದೇಶಗಳ ಮೂರು ವಲಯಗಳಲ್ಲಿ ಲೆಫ್ಟಿನೆಂಟ್ ಜನರಲ್ ಮಟ್ಟದ ಗಡಿ ಸಿಬ್ಬಂದಿ ಸಭೆ ಮತ್ತು ವಾಯು ಸೇವೆಗಳ ಪುನರಾರಂಭ ಸೇರಿದAತೆ ಸಂಬAಧಗಳ ಸಾಮಾನ್ಯಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಎರಡೂ ದೇಶಗಳ ನಡುವೆ ಸಂಬAಧಗಳ ಸುಧಾರಣೆ, ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ, ಗಡಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯತೆ ಇದೆ ಎನ್ನಲಾಗಿದೆ.
ಉಭಯ ದೇಶಗಳ ಮುಖ್ಯಸ್ಥೆ ಮಾತುಕತೆಗೂ ಮುನ್ನ ಪಶ್ಚಿಮ, ಮಧ್ಯ ಮತ್ತು ಪೂರ್ವ ವಲಯದ ಚುಶುಲ್, ನಾಥು ಲಾ ಮತ್ತು ಕಿಬುಥೂ ಅಥವಾ ಯಾಂಗ್ಟೆ÷್ಜಯಲ್ಲಿ ಭಾರತೀಯ ಸೇನೆ ಮತ್ತು ಪಿಎಲ್‌ಎ ನಡುವೆ ಲೆಫ್ಟಿನೆಂಟ್ ಜನರಲ್‌ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆಸುವ
ಸಾಧ್ಯತೆ ಇದೆ. ಪ್ರಸ್ತುತ, ಪೂರ್ವ ಲಡಾಖ್‌ನ ಚುಶುಲ್‌ನಲ್ಲಿ 14 ನೇ ಕಾರ್ಪ್ಸ್ ಕಮಾಂಡರ್ ಮತ್ತು ಸಿಂಕಿಯಾAಗ್ ಮಿಲಿಟರಿ ವಿಭಾಗದ ಕಮಾಂಡರ್ ನಡುವೆ ಏಕೈಕ ಸಾಮಾನ್ಯ ಮಟ್ಟದ ಮಾತುಕತೆ ನಡೆಯುತ್ತಿದೆ. ಆಗಸ್ಟ್ 19 ರಂದು ನಡೆದ 24 ನೇ ಸುತ್ತಿನ ವಿಶೇಷ ಪ್ರತಿನಿಧಿ ಮಾತುಕತೆಯಲ್ಲಿ ಗಡಿಯಲ್ಲಿ ಮಿಲಿಟರಿ ಸಂವಾದ ಸಾಮಾನ್ಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯ ನಂತರ ಸಾಮಾನ್ಯ ಮಟ್ಟದ ಸಂವಾದದ ದಿನಾಂಕಗಳನ್ನು ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.