Tuesday, February 4, 2025
Flats for sale
Homeಕ್ರೀಡೆನವದೆಹಲಿ : ಟೀಮ್ ಇಂಡಿಯಾಗೆ ಮುಂದಿನ ಹೆಡ್‌ ಕೋಚ್‌ ಆಗಿ ಗೌತಮ್ ಗಂಭೀರ್ ನೇಮಕ :...

ನವದೆಹಲಿ : ಟೀಮ್ ಇಂಡಿಯಾಗೆ ಮುಂದಿನ ಹೆಡ್‌ ಕೋಚ್‌ ಆಗಿ ಗೌತಮ್ ಗಂಭೀರ್ ನೇಮಕ : ವರದಿ.

ನವದೆಹಲಿ : ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಬಳಿಕ ಭಾರತ ತಂಡಕ್ಕೆ ಗೌತಮ್‌ ಗಂಭೀರ್‌ ಹೆಡ್‌ ಕೋಚ್ ಆಗಲಿದ್ದಾರಂದು ಕ್ರಿಕ್‌ಬಝ್‌ ವರದಿ ಮಾಡಿದೆ. ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಸಂಬಂಧ ಗೌತಮ್‌ ಗಂಭೀರ್‌ ಹಾಗೂ ಬಿಸಿಸಿಐ ನಡುವೆ ಒಪ್ಪಂದ ಆಗಿದೆ ಎಂದು ಐಪಿಎಲ್‌ ಫ್ರಾಂಚೈಸಿ ಮಾಲೀಕರೊಬ್ಬರು ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ವರದಿಯಾಗಿದೆ.

ಭಾರತ ತಂಡದ ಮುಖ್ಯ ತರಬೇತುದಾರರಾಗಿ ಗೌತಮ್ ಗಂಭೀರ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಐಪಿಎಲ್​ ಮಾಲೀಕರೊಬ್ಬರು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.ಭಾರತ ತಂಡದಲ್ಲಿ ರಾಹುಲ್‌ ದ್ರಾವಿಡ್‌ ಅವರ ಸ್ಥಾನವನ್ನು ತುಂಬಲು ಉತ್ಸುಕನಾಗಿದ್ದೇನೆಂದು ಗೌತಮ್ ಗಂಭೀರ್‌ ಅವರು, ತಮ್ಮ ಆತ್ಮೀಯ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. 2024ರ ಐಪಿಎಲ್‌ ಟೂರ್ನಿಯಲ್ಲಿ ಗೌತಮ್‌ ಗಂಭೀರ್‌ ಮೆಂಟರ್‌ ಆಗಿದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಚಾಂಪಿಯನ್‌ ಆಗಿದೆ. ಅದರಲ್ಲಿಯೂ ಗಂಭೀರ್‌ ಎಂದರೆ ಕೆಕೆಆರ್‌ ಮಾಲೀಕರಾದ ಶಾರೂಖ್‌ ಖಾನ್ ಅವರಿಗೆ ತುಂಬಾ ಅಚ್ಚು ಮೆಚ್ಚು. ಹಾಗಾಗಿ ಗಂಭೀರ್‌ ಅವರ ಮುಂದಿನ ನಡೆಯ ಬಗ್ಗೆ ಬಾಲಿವುಡ್‌ ನಟನಿಗೆ ಅರಿವಿದೆ.

ಇದೀಗ ಭಾರತದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಅವರ ನೇಮಕವನ್ನು ಐಪಿಎಲ್ ಮಾಲೀಕರು ಖಚಿತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಕ್ರಿಕ್​ಬಝ್​ ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಿ ಜಿಜಿ (ಗೌತಮ್ ಗಂಭೀರ್) ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular