Thursday, September 18, 2025
Flats for sale
Homeವಾಣಿಜ್ಯನವದೆಹಲಿ : ಜಿಎಸ್‌ಟಿ ಕಡಿತದಿಂದ : ಕಾರುಗಳ ಬೆಳೆಗಳಲ್ಲಿ 3.5 ಲಕ್ಷ ರೂ. ವರೆಗೆ ಆಫರ್.!

ನವದೆಹಲಿ : ಜಿಎಸ್‌ಟಿ ಕಡಿತದಿಂದ : ಕಾರುಗಳ ಬೆಳೆಗಳಲ್ಲಿ 3.5 ಲಕ್ಷ ರೂ. ವರೆಗೆ ಆಫರ್.!

ನವದೆಹಲಿ : ಜಿಎಸ್‌ಟಿ ಮಂಡಳಿಯು ವಾಹನಗಳ ತೆರಿಗೆ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ವಾಹನಗಳ ತಯಾರಿಕಾ ಕಂಪನಿಗಳು ಈಗ ತಮ್ಮ ವಾಹನಗಳ ಮಾರಾಟ ದರವನ್ನು ಇಳಿಕೆ ಮಾಡಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕ್ರಮ ಕೈಗೊಂಡಿವೆ. ಕಾರುಗಳ ದರ ಕಡಿತದಲ್ಲಿ ಟೊಯೊಟಾ ಕಂಪನಿ ಮುAಚೂಣಿಯಲ್ಲಿದ್ದು ತನ್ನ ಫಾರ್ಚುನರ್ ಕಾರಿನ ದರದಲ್ಲಿ ಗರಿಷ್ಟ 3.49 ಲಕ್ಷ ರೂ. ಕಡಿತ ಮಾಡುವುದಾಗಿ ಘೋಷಿಸಿದೆ.

ದೇಶದ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡುವುದನ್ನು ಶುಕ್ರವಾರ ಘೋಷಿಸಿದೆ. ಇದರ ಬೆನ್ನಲ್ಲೇ ಮಹೀಂದ್ರಾ, ಮಾರುತಿ ಮತ್ತು ರೆನಾಲ್ಟ್ ಇಂಡಿಯಾ ಕಾರು ಕಂಪನಿಗಳೂ ಜಿಎಸ್ಟಿ ಕಡಿತ ಲಾಭವನ್ನು ಗ್ರಾಹರಿಗೆ ನೀಡುವುದಾಗಿ ಶನಿವಾರ ಘೋಷಿಸಿವೆ. ಇದರಿಂದಾಗಿ ಈ ಕಂಪನಿಗಳ ಕಾರುಗಳ ಬೆಲೆಯಲ್ಲಿ 1.56 ಲಕ್ಷ ರೂ. ವರೆಗೂ ಇಳಿಕೆಯಾಗುತ್ತಿವೆ. ಟೊಯಾಟಾ, ಟಾಟಾ ಹಾಗೂ ರೆನಾಲ್ಟ್ ಕಂಪನಿಗಳ ಕಾರುಗಳ ಬೆಲೆ ಇಳಿಕೆ ಸೆಪ್ಟಂಬರ್ ೨೨ರಿಂದ ಜಾರಿಗೆಬರಲಿದೆ. ಆದರೆ ಮಹೀಂದ್ರಾ ಎಂಡ್ ಮಹೀಂದ್ರ ಕAಪನಿಗಳ ವಾಹನಗಳ ಬೆಲೆ ಸೆ.6 ರ ಶನಿವಾರದಿಂದಲೇ ಜಾರಿಗೆ ಬಂದಿದೆ.

ಇತ್ತೀಚೆಗೆ 56 ನೇ ಜಿಎಸ್ಟಿ ಕೌನ್ಸಿಲ್ ಸೆಪ್ಟೆಂಬರ್ 22 ರಿAದ ಜಾರಿಗೆ ಬರುವಂತೆ ಸಣ್ಣ ಕಾರುಗಳು, 350 ಸಿಸಿವರೆಗಿನ ಬೈಕ್‌ಗಳು, ತ್ರಿಚಕ್ರ ವಾಹನಗಳು, ಬಸ್
ಹಾಗೂ ಆಂಬ್ಯುಲೆನ್ಸ್ಗಳ ಮೇಲಿನ ತೆರಿಗೆ ದರವನ್ನು ಶೇ. 28 ರಿಂದ ಶೇ.18ಕ್ಕೆ ಇಳಿಸಿತ್ತು. ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿಯು ಪ್ರಯಾಣಿಕ ಕಾರುಗಳ ಬೆಲೆಯಲ್ಲಿ 64 ಸಾವಿರ ರೂ.ಗಳಿಂದ 1.55 ಲಕ್ಷ ರೂ.ವರೆಗೂ ಕಡಿತಗೊಳಿಸಿದೆ. ಟಿಯಾಗೊ ಕಾರಿನ ಬೆಲೆ 75 ಸಾವಿರ ರೂ. ಕಡಿತಗೊಂಡಿದೆ. ಟಿಗೊರ್ 80 ಸಾವಿರ, ಅಲ್ಟೊçÃಜ್ 1,10,೦೦೦ ರೂ. ಪಂಚ್ 85 ಸಾವಿರ ರೂ. ನೆಕ್ಸಾನ್ 1,55,೦೦೦ ರೂ, ಹ್ಯಾರಿಯರ್ 1,40,೦೦೦ ರೂ. ಹಾಗೂ ಸಫಾರಿ ಕಾರಿನಲ್ಲಿ 1,45,೦೦೦ ರೂ ಕಡಿತಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದೇ ವೇಳೆ ಮಹಿಂದ್ರಾ ಎಂಡ್ ಮಹೀಂದ್ರಾ ಕAಪನಿಯು ಶನಿವಾರದಿಂದಲೇ ಜಾರಿಗೆ ಬರುವಂತೆ ಕಾರುಗಳ ಮಾದರಿಗಳನುಸಾರವಾಗಿ 1.೦1 ಲಕ್ಷ
ರೂ.ನಿಂದ ಆರಂಭಿಸಿ 1.56 ಲಕ್ಷ ರೂ.ವರೆಗೆ ಕಡಿತಗೊಳಿಸಿರುವುದಾಗಿ ಘೋಷಿಸಿದೆ. ಟಾಟಾ ಮತ್ತು ಮಹಿಂದ್ರಾ ಹೊರತು ಪಡಿಸಿ ರೆನಾಲ್ಟ್ ಕಂಪನಿಯೂ ತನ್ನ ಕಾರುಗಳ ಬೆಲೆಯಲ್ಲಿ 96,395 ರೂ.ವರೆಗೆ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular