ನವದೆಹಲಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ… ಹೀಗಾಗಿದೆ ಭಾರತ ಕ್ರಿಕೆಟ್ ತಂಡದ ಪರಿಸ್ಥಿತಿ. ಈಗ ಎಲ್ಲರ ಬಾಯಲ್ಲೂ ಇದೇ ಮಾತು. ವಿಶ್ವಕಪ್ ಕ್ರಿಕೆಟ್ನ ಉದ್ದಕ್ಕೂ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ತಂಡ ನಿರ್ಣಾಯಕ ಪಂದ್ಯದಲ್ಲಿ ಆಸ್ಟೆçÃಲಿಯಾಗೆ ಆರು ವಿಕೆಟ್ಗಳಿಂದ ಸೋತು ಕಪ್ ಗೆಲ್ಲುವ ಆಸೆ ಭಗ್ನವಾಯಿತು.
೧೩೦ ಕೋಟಿ ಭಾರತೀಯರಲ್ಲಿ ಸ್ಮಶಾನ ಮೌನ ಆವರಿಸಿತ್ತು. ಇದರ ಬೆನ್ನಲ್ಲೇ ಟೀಕೆ ಟಿಪ್ಪಣೆಗಳ ಸುರಿಮಳೆಗಳೂ ಆದವು. ಆದರೆ ಕೊನೆಯಲ್ಲಿ ವಾಸ್ತವಕ್ಕೆ ಮರಳಿದ ಕೋಟ್ಯಂತರ ಅಭಿಮಾನಿಗಳು, ಭಾರತ ತಂಡದ ಬೆಂಬಲಕ್ಕೆ ನಿಂತರು. ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಈ ಕೆಲಸಕ್ಕೆ ಮುಂದಾದರು. ಫೈನಲ್ಪಂ ದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬAದಿದ್ದ ಅವರು, ಪಂದ್ಯದ ಬಳಿಕ ಭಾರತೀಯ ತಂಡದ ಡ್ರೆಸಿಂಗ್ ರೂಮ್ಗೆ ತೆರಳಿ ಆಟಗಾರರಿಗೆ ಸಮಾಧಾನ ಹೇಳಿದರು. ಧೈರ್ಯ ತುಂಬಿದರು. ಪ್ರಧಾನಿ ಮೋದಿ ಅವರಿಗೆ ಹಸ್ತಲಾಘವ ನೀಡುತ್ತಿರುವ ಚಿತ್ರವನ್ನು ಆಲ್ ರೌಂಡರ್ ರವೀAದ್ರ ಜಡೇಜಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾರೆ.
“ನಾವು ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದರೂ ಕೊನೆಯಲ್ಲಿ ಎಡವಿದೆವು. ಇದರಿಂದ ನಮ್ಮ ಹೃದಯ ಒಡೆದುಹೋಯಿತು. ಆದರೆ ನಮಗೆ ಕ್ರೀಡಾಭಿಮಾನಿಗಳಿಂದ ಹರಿದುಬರುತ್ತಿರುವ ಬೆಂಬಲದಿAದ ಧೈರ್ಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸಿಂಗ್ ರೂಮ್ಗೆ ಭೇಟಿ ನೀಡಿದ್ದು ವಿಶೇಷ ಹಾಗೂ ಸ್ಫೂರ್ತಿದಾಯಕವಾಗಿತ್ತು” ಎಂದು ಅವರು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ”ನಮ್ಮ ಡ್ರೆಸಿಂಗ್ ರೂಮ್ಗೆ ಭೇಟಿ
ನೀಡಿ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಆಭಾರಿಯಾಗಿದ್ದೇವೆ” ಎಂದು ವೇಗದ ಬೌಲರ್ ಮೊಹಮ್ಮದ್ ಶಮಿ ಹೇಳಿದ್ದಾರೆ. ಇತ್ತ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೂ ಅಭಿಮಾನಿಗಳ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಫೈನಲ್ನಲ್ಲಿ ಸೋತರೂ, ಅವರು ತಮ್ಮ ಉತ್ತಮ ಆಟ ಹಾಗೂ ಸ್ಫೂರ್ತಿದಾಯಕ ನಾಯಕತ್ವದಿಂದ ಜನಮನ ಗೆದ್ದಿದ್ದಾರೆ.
ಫೈನಲ್ ಪಂದ್ಯ ಸೋತ ಕೂಡಲೇ ತೀವ್ರ ನಿರಾಶರಾದ ಅವರು ಕಣ್ಣೀರು ಹಾಕುತ್ತಲೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಆಗ, ಅವರಿಗೆ ಮಾನಸಿಕ ಸ್ಥೆöÊರ್ಯ ನೀಡಲು ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳು ಮುಂದಾದರು. ರೋಹಿತ್.. ರೋಹಿತ್.. ಎಂಬ ಘೋಷಣೆಯ ಮೂಲಕ ಅವರಿಗೆ ಬೆಂಬಲ ಸೂಚಿಸಿದರು.
ಖ್ಯಾತ ಆಲ್ ರೌಂಡರ್ ಹಾಗೂ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೂಡ ರೋಹಿತ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.


