Friday, November 22, 2024
Flats for sale
Homeದೇಶನವದೆಹಲಿ ; ಆಗಸ್ಟ್‌ ನಲ್ಲಿ ಮೋದಿ ಸರ್ಕಾರ ಪತನ : ಕಾರ್ಯಕರ್ತರು ಸಿದ್ಧರಾಗಿರಲು ಕರೆನೀಡಿದ ಲಾಲೂ...

ನವದೆಹಲಿ ; ಆಗಸ್ಟ್‌ ನಲ್ಲಿ ಮೋದಿ ಸರ್ಕಾರ ಪತನ : ಕಾರ್ಯಕರ್ತರು ಸಿದ್ಧರಾಗಿರಲು ಕರೆನೀಡಿದ ಲಾಲೂ ಪ್ರಸಾದ್‌ ಯಾದವ್‌.

ನವದೆಹಲಿ ; ದೇಶದಲ್ಲಿಅಧಿಕಾರದ ಚುಕ್ಕಾಣಿ ಹಿಡಿದಿರುವ ಮೈತ್ರಿಕೂಟ ಇನ್ನೇನು ಆಗಸ್ಟ್ ತಿಂಗಳಲ್ಲಿ ಪತನವಾಗಬಹುದು ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ.

300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಬಿಜೆಪಿ 240 ಸ್ಥಾನಗಳಿಗೆ ಸೀಮಿತವಾಯಿತು ಮತ್ತು ಸಮ್ಮಿಶ್ರ ಸರ್ಕಾರ ರಚಿಸಲು ಮೈತ್ರಿ ಪಾಲುದಾರರನ್ನು ಅವಲಂಬಿಸಬೇಕಾಯಿತು. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳೊಳಗೆ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು “ಅತ್ಯಂತ ದುರ್ಬಲವಾಗಿದೆ” ಎಂದು ಲಾಲು ಯಾದವ್ ಹೇಳಿದ್ದಾರೆ. “

ನಿಂದ ಮೈತ್ರಿಕೂಟದ ಮುಖ್ಯ ಪಾಲುದಾರರಾಗಿರುವ ಚಂದ್ರ ಬಾಬು ನಾಯ್ಡು ಹಾಗೂ ನಿತೇಶ್ ಕುಮಾರ್ ಅವಕಾಶವಾದಿಗಳಂತೂ ನಿಜ. ಆದರೆ ಈ ಬರಿ ಬಿಜೆಪಿ ಗೆ ಉತ್ತರ ಪ್ರದೇಶ ,ಮುಂಬೈ ಹಾಗೂ ಇನ್ನಿತರ ರಾಜ್ಯಗಳಲ್ಲಿ ಹಿನ್ನಡೆ ಯಾಗಿರುವುದೇ ಮುಖ್ಯ ಕಾರಣ ,ಅದರಲ್ಲೂ ಈ ಹಿಂದೆ ಪ್ರತಿನಿಧಿಸಿದ್ದ ಸಂಸದರು ಸರಿಯಾಗಿ ಕೆಲಸ ಮಾಡದೇ ಇರುವುದೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ ಮತ್ತು ಆಗಸ್ಟ್ ವೇಳೆಗೆ ಅದು ಬೀಳಬಹುದು”ಎಲ್ಲಾ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಲು ನಾನು ಮನವಿ ಮಾಡುತ್ತೇನೆ, ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು.ಶುಕ್ರವಾರ ರಾಷ್ಟ್ರೀಯ ಜನತಾ ದಳದ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಲಾಲು ಯಾದವ್ ಈ ಹೇಳಿಕೆ ನೀಡಿದ್ದಾರೆ. ಆರ್‌ಜೆಡಿ ಮುಖ್ಯಸ್ಥರು ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಬಗ್ಗೆ ಮತ್ತಷ್ಟು ತೃಪ್ತಿ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular