ಧಾರವಾಡ ; ಹೈಕೋರ್ಟ್ಗೆ ಇ- ಮೇಲ್ ಮೂಲಕ ಬೆದರಿಕೆ ಕರೆ ಬಂದಿದ್ದು ಇದೊಂದು ಆತಂಕ ಸೃಷ್ಟಿಸಿರೋ ಕರೆಯಾಗಿದೆ.
ಕೋರ್ಟ್ನ ಅಡಿಷನಲ್ ರೆಜಿಸ್ಟ್ರಾರ್ ಜನರಲ್ಗೆ ಮೇಲ್ ಬಂದಿದ್ದು ಆರ್ ಡಿ ಎಕ್ಸ್ ಬಾಂಬ್ ಹಾಕೋದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರಿಂದ ತೀವ್ರ ತಪಾಸಣೆ ನಡೆಸಲಾಗಿದೆ.
ಪೊಲೀಸರು ಕೋರ್ಟ್ನಿಂದ ಎಲ್ಲರನ್ನು ಹೊರ ಕಳಿಸಿದ್ದು ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ. ಧಾರವಾಡ ತಾಲೂಕಿನ ಬೇಲೂರು ಬಳಿಯ ಹೈಕೋರ್ಟ್ ಇದಾಗಿದ್ದ ಗರಗ್ ಠಾಣಾ ವ್ಯಾಪ್ತಿಯಲ್ಲಿದೆ.ಇದೀಗ ಧಾರವಾಡದ ಹೈಕೋರ್ಟ್ ನಿಂದ ವಕೀಲರನ್ನು ಖಾಕಿ ಪಡೆಗಳು ಹೊರಹಾಕುತ್ತಿದ್ದು ಎಸ್ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಸಂಪೂರ್ಣ ಕೋರ್ಟ್ ಖಾಲಿ ಮಾಡಿಸಿದ್ದಾರೆ.


