ಧಾರವಾಡ : ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಧಗಧಗ ಹೊತ್ತಿ ಉರಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದಲ್ಲಿ ನಡೆದಿದೆ.

ಕಾರ್ ನಲ್ಲಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಸಾಲಿಮಠ ಸಜೀವ ದಹನವಾಗಿದ್ದು ಕಾರ್ ನಲ್ಲಿಯೇ ಇನ್ಸ್ಪೆಕ್ಟರ್ ದೇಹ ಹೊತ್ತಿ ಉರಿದಿದೆ.
ಗದಗದಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಕಾರು ರಾಷ್ಟ್ರೀಯ ಹೆದ್ದಾರಿ ಬಳಿ I20 ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮೃತರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಸಾಲಿಮಠ ಎಂದು ತಿಳಿದುಬಂದಿದೆ. ಗದಗದಲ್ಲಿ ಇರುವ ಕುಟುಂಬದ ಕಡೆ ಬೇಟಿ ಮಾಡಲು ಇನ್ಸ್ಪೆಕ್ಟರ್ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯಲಿ ಘಟನೆ ನಡೆದಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ.


