Thursday, November 6, 2025
Flats for sale
Homeರಾಜ್ಯದಾವಣಗೆರೆ : 10ಕ್ಕೂ ಅಧಿಕ ಬಾಲಕಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕಿ,ವಿಡಿಯೋ ವೈರಲ್.

ದಾವಣಗೆರೆ : 10ಕ್ಕೂ ಅಧಿಕ ಬಾಲಕಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕಿ,ವಿಡಿಯೋ ವೈರಲ್.

ದಾವಣಗೆರೆ : ಮಕ್ಕಳು ಶಾಲೆಗೆ ಹೋಗೋದು ವಿಧ್ಯೆ ಬುದ್ದಿ ಆಚಾರ ವಿಚಾರಗಳನ್ನು ಕಲಿಯಲು ಹೊರತು ಸೌಚಾಲಯ ಸ್ವಚ್ಛಗೊಳಿಸಲಾ ಎಂಬ ಪ್ರಶ್ನೆ ಮೂಡಿಬಂದಿದೆ ,ಕಳೆದ ಹಲವು ತಿಂಗಳಿನಿಂದ ಅನೇಕ ಸುದ್ದಿಗಳು ಬಂದರು ಆಡಳಿತ ವ್ಯವಸ್ಥೆ ಇನ್ನು ಮೂಕಮೌನವಾದಂತಿದೆ.

ದಾವಣಗೆರೆ ತಾಲೂಕಿನ‌ ಮೆಳ್ಳೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ಕ್ಕೂ ಅಧಿಕ ಬಾಲಕಿಯರು ಶೌಚಾಲಯ ಸ್ವಚ್ಛಗೊಳಿಸಿದ್ದು ರಾಜ್ಯದಲ್ಲಿ‌ ಮತ್ತೊಂದು ಅಮಾನವೀಯ ಹಾಗೂ ಸಮಾಜ ತಲೆ ತಗ್ಗಿಸುವ ಘಟನೆ ಬೆಳಕಿಗೆ ಬಂದಿದೆ. ಶಾಲಾ ಬಾಲಕಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ಮತ್ತೊಂದು ಪ್ರಕರಣ ಬಹಿರಂಗವಾಗಿದೆ.

ಬಡವರು ಕಲಿಯುವ ಸರಕಾರಿ ಶಾಲೆಯಲ್ಲಿ ಇಂತಹ ಘಟನೆ ಹೆಚ್ಚಾಗಿದ್ದು ಮಕ್ಕಳನ್ನ ಶೌಚಾಲಯ ಸ್ವಚ್ಚಗೊಳಿಸಲು ಬಳಸಿಕೊಳ್ಳುತ್ತಿರುವ ಶಾಲೆಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು ವಿದ್ಯಾರ್ಥಿಗಳು ಬಕೆಟ್ ನಲ್ಲಿ ನೀರು ತಂದು ಪೊರಕೆಯಿಂದ ಶೌಚಾಲಯ ಸ್ವಚ್ಚ ಗೊಳಿಸುತ್ತಿರುವ ಬಾಲಕಿಯರ ವಿಡಿಯೋ ವೈರಲ್ ಆಗಿದೆ.ಶಾಲೆಯ ಸಮವಸ್ತ್ರದಲ್ಲಿ ಪೊರಕೆ ಹಿಡಿದು ಬಾಲಕಿಯರು ಶೌಚಾಲಯ ಸ್ವಚ್ಚ ಮಾಡಿದ್ದಾರೆ. ಶಾಲೆಯ ಮುಖ್ಯ‌ಶಿಕ್ಷಕಿ ಹೈಸ್ಕೂಲ್ ಮಕ್ಕಳಿಂದ ಶೌಚಾಲಯ ಸ್ವಚ್ಚ ಮಾಡಿಸಿದ್ದಾರೆ. ಸ್ವತಹ ಗಾಂಧಿಜಿಯೇ ತಮ್ಮ ಶೌಚಾಲಯ ಸ್ವಚ್ಚ ಮಾಡಿಕೊಳ್ಳುತ್ತಿದ್ದರು,ನೀವು ಸ್ವಚ್ಚಗೊಳಿಸಿ ಎಂದು ಮುಖ್ಯ ಶಿಕ್ಷಕಿ ಸೂಚನೆ ನೀಡಿದ್ದದ್ದಾರೆಂದು ತಿಳಿದುಬಂದಿದೆ.

ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯವಾಗಿ ನಿಷೇಧಿಸಿತ್ತು.ಕಳೆದ ಕೆಲ ದಿನಗಳ ಹಿಂದೆ ಮಕ್ಕಳಿಂದ ಶಾಲಾ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು,ಇದೀಗ ನಿಷೇಧದ ನಡುವೆಯೂ ದಾವಣಗೆರೆಯಲ್ಲಿ ಇಂತಹದ್ದೇ ಘಟನೆ ಬಯಲಾಗಿದೆ.

ಶಿಕ್ಷಣ ಇಲಾಖೆ ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಮತ್ತೆ ಮತ್ತೆ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುವ ಘಟನೆಗಳು ನಡೆಯುತ್ತಿರುವುದು ಒಂದು ದೊಡ್ಡ ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular