ತೈಪೆ : ತೈವಾನ್ನ ಮೇಲೆ ಬುಧವಾರ ಬೆಳಗ್ಗೆ ಎರಗಿದ ವಿನಾಶಕಾರಿ ಭೂಕಂಪದಲ್ಲಿ ಕನಿಷ್ಠ 9 ಜನರು ಬಲಿಯಾಗಿ 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ನೂರಾರು ಜನರು ಕಾಣೆಯಾಗಿದ್ದು, ರಕ್ಷಣಾ ತಂಡಗಳಿAದ ವ್ಯಾಪಕ ಕಾರ್ಯಾಚರಣೆ ನಡೆದಿದೆ. ಭೂಕಂಪದ ಬೆನ್ನಲ್ಲೇ ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಸುನಾಮಿಯ ಅಲೆಗಳು ಬಲವಾಗಿ ಅಪ್ಪಳಿಸಿವೆ.
ಕಳೆದ 25 ವರ್ಷಗಳಲ್ಲೇ ದ್ವೀಪರಾಷ್ಟ್ರಕ್ಕೆ ದುಃಸ್ವಪ್ನವಾದ ಭೂಕಂಪ ರಿಕ್ಟರ್ ಮಾಪಕದಲ್ಲಿ 7.4ರಷ್ಟಿತ್ತು. ಹುವಾಲಿಯನ್ ಬಳಿ ಭೂಕಂಪ ಕೇAದ್ರೀಕೃತವಾಗಿತ್ತು. ತೈವಾನ್ ರಾಜಧಾನಿ ತೈಪೆಯಲ್ಲಿ ೩೦ಕ್ಕೂ ಹೆಚ್ಚು ಭಾರಿ ಕಟ್ಟಡಗಳು ಧರಾಶಾಹಿಯಾಗಿದ್ದು, ಈವರೆಗೆ 9 ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಕಟ್ಟಡಗಳ ಅವಶೇಷಗಳಡಿ ಇನ್ನೂ ಅನೇಕರು ಸಿಕ್ಕಿಬಿದ್ದಿದ್ದು, ಸಾವು-ನೋವು ಮತ್ತಷ್ಟು ಹೆಚ್ಚಾಗುವ ಭೀತಿಯಿದೆ.
ಈ ಮಧ್ಯೆ, ಭೂಕಂಪದ ಹೊಡೆತಕ್ಕೆ ತೈವಾನ್ನ ತೊರೊಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಂಡೆಗಳು ಕುಸಿದು ಮೂವರನ್ನು ಬಲಿತೆಗೆದುಕೊಂಡಿದೆ. 1999ರಲ್ಲಿ 7.6 ತೀವ್ರಗೆಯ ಭೂಕಂಪದಿAದ 2400 ಜನರು ಬಲಿಯಾಗಿದ್ದೇ ತೈವಾನ್ನ ಭೀಕರ ನೈಸರ್ಗಿಕ ವಿಕೋಪವಾಗಿದೆ.


