ತುಮಕೂರು : ಬ್ಯಾಂಕಿನಲ್ಲಿ ಸರಿಯಾಗಿ ಸಾಲಕೊಡುತಿದ್ದರೆ ಕೆಳವರ್ಗದ ಜನರು ಈ ಮೀಟರ್ ಬಡ್ಡಿ ಯನ್ನು ಅನುಸರಿಸುವ ಅವಶ್ಯಕತೆ ಇರುವುದಿಲ್ಲ , ಮೀಟರ್ ಬಡ್ಡಿ ಎಂಬುದು ಇದು ದೊಡ್ಡ ದಂದೆ ಇಲ್ಲಿ ಇದಕ್ಕಿಂತ ಮೊದಲು ಇನ್ನೆಷ್ಟೋ ಜೀವ ಬಲಿಯಾಗಿದೆ ಮುಂದೇನು ಬಲಿಯಾಗಲಿದೆ ಆದರೆ ಈ ದಂದೆ ಮಾಡುವ ಕಟುಕರಿಗೆ ಈ ವರೆಗೂ ಸರಿಯಾಗಿ ಶಿಕ್ಷೆ ಯಾಗಲಿಲ್ಲ ,ಯಾಕೆಂದರೆ ಇದರಲ್ಲಿ ಬಿಜೆಪಿ ಕಾಂಗ್ರೆಸ್ ಅಂತ ಎಲ್ಲಾ ಪಕ್ಷದ ನಾಯಕರು ಇದ್ದಾರೆ.
ಮಂಗಳೂರು ,ಬೆಂಗಳೂರು ಅಲ್ಲಿ ಅಂತೂ ಹೇಳುವುದೇ ಬೇಡ ,ರಾಜಕೀಯ ನಾಯಕರ ಚೇಲರು ಕಪ್ಪು ಹಣವನ್ನು ಬಿಳಿಯಾಗಿಸಲು ಮಾಡುವ ದಂದೆ ಇದು, ಮಂಗಳೂರಿನ ಬಿಜೆಪಿ ಪಕ್ಶದಲ್ಲಂತೂ ಇರುವುದು ಎಲ್ಲಾ ಬಡ್ಡಿಗೆ ಕೊಡುವ ಮಕ್ಕಳೇ ,ಪೊಲೀಸ್ ಇಲಾಖೆಯಲ್ಲೂ ಇದೆ ,ಪೊಲೀಸರು ಕೂಡ ಬಡ್ಡಿಗೆ ಕೊಟ್ಟು ವಸೂಲಿ ಮಾಡುವ ಪರಿ ಎಲ್ಲರಿಗೂ ತಿಳಿದ ವಿಷಯ ,ಇಷ್ಟಬಂದಂತೆ ಬಡ್ಡಿ ಹಾಕಿ ಬಡವರನ್ನು ಸಾವಿನ ಕೂಪಕ್ಕೆ ತಳ್ಳುವ ದೊಡ್ಡ ದಂಡೆಯಾಗಿಬಿಟ್ಟಿದೆ ,ಪೊಲೀಸ್ ಇಲಾಖೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಈ ಬಡ್ಡಿ ಕೋರರನ್ನು ಬಂಧಿಸಿ ಸರಿಯಾದ ಕ್ರಮವಹಿಸಬೇಕೆಂಬುದು ಜನಸಾಮಾನ್ಯರ ಮಾತು .
ತುಮಕೂರು ಜಿಲ್ಲೆ ಸೇರಿ ರಾಜ್ಯಾದ್ಯಂತ ಮೀಟರ್‌ಬಡ್ಡಿ ದಂಧೆಗೆ ಜೀವ ಬಂದಿದ್ದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನೇಕಾರರು, ಸಣ್ಣ ವ್ಯಾಪಾರಿಗಳು ಲಕ್ಷಾಂತರ ರೂ. ಸಾಲ ಪಡೆದು ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
೨೦೧೫ ರ ಜ.೯ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಯುವಕ ರಾಘವೇಂದ್ರ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಸೆಲ್ಫಿ ವಿಡಿಯೊ ಮಾಡಿ ಸಾವಿಗೆ ಶರಣಾಗಿದ್ದ. ಇದೀಗ ಇಂತಹುದೇ ಪ್ರಕರಣ ತುಮಕೂರಿನ ಸದಾಶಿವನಗರದಲ್ಲಿ ನಡೆದಿದ್ದು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕರಿಗೆ ಬಡವರ ಬಂಧು ಯೋಜನೆ ಮೂಲಕ ೨-೧೦ ಸಾವಿರ ರೂ. ಸಾಲ
ಪಡೆಯಬಹುದಾಗಿದೆ ಆದರೆ, ಡಿಸಿಸಿ ಬ್ಯಾಂಕ್ ಸುತ್ತ ದಾಖಲೆ, ಅರ್ಜಿ ಹಿಡಿದು ಅಲೆಯುವುದೇಕೆ ಎಂದು ಕೆಲವರು ಬಡ್ಡಿಗೆ ಹಣ ಪಡೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಫೈನಾನ್ಸ್ ಕಂಪನಿಗಳು ಮನಸೋ ಇಚ್ಛೆ ಬಡ್ಡಿ ದರ ಫಿಕ್ಸ್ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವುದು ವಾಸ್ತವ.
ಬಡ್ಡಿ ದಂಧೆಕೋರರು ಎಪಿಎಂಸಿ, ಮಾರುಕಟ್ಟೆಗಳ ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ ೫ ಗಂಟೆಗೆ ಸಾಲ ನೀಡುತ್ತಾರೆ. ಕೊಡುವಾಗಲೇ ಶೇ.೧೦-೧೫ ಬಡ್ಡಿ ದರ ಕಡಿತಗೊಳಿಸಿ ನೀಡಿ, ಸಂಜೆ ಮರಳಿ ವಾಪಸ್ ಪಡೆಯುತ್ತಾರೆ. ಜತೆಗೆ, ನೇಕಾರರು, ಸಣ್ಣ ವ್ಯಾಪಾರಸ್ಥರಿಗೆ ಮಾಸಿಕ ಶೇ.೧೦ ಬಡ್ಡಿ
ದರಕ್ಕೆ ಸಾಲ ನೀಡುತ್ತಾರೆ.
ದಂಧೆಗೆ ಬಲಿ
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ರಾಘವೇಂದ್ರ ತಾನು ಪಡೆದಿದ್ದ ೮ ಲಕ್ಷ ರೂ. ಸಾಲಕ್ಕೆ ಲಕ್ಷಾಂತರ ರೂ. ಬಡ್ಡಿ ಸೇರಿಸಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿಡಿಯೊದಲ್ಲಿ ಈ ವಿವರ ತಿಳಿಸಿದ್ದ. ತುಮಕೂರಿನ ಸದಾಶಿವ ನಗರದ ನಿವಾಸಿ ಗರೀಬ್ ಸಾಬ್ (೩೨), ಪತ್ನಿ ಸುಮಯ್ಯ (೩೦) ದಂಪತಿ ಡೆತ್ ನೋಟ್ ಬರೆದಿಟ್ಟು, ತಮ್ಮ ಮೂವರು ಮಕ್ಕಳಾದ ಪುತ್ರಿ ಹಾಜಿರಾ (೧೪), ಪುತ್ರರಾದ ಮೊಹಮ್ಮದ್ ಸುಭಾನ್ (೧೦), ಮೊಹಮ್ಮದ್ ಮುನೀರ್ (೮) ಅವರಿಗೆ ವಿಷ ಉಣಿಸಿ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.