ತುಮಕೂರು : ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನಪ್ಪಿದ್ದು 7 ಮಂದಿ ಗಾಯಗೊಂಡ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿ ಬೆಳ್ಳಾವಿ ಕ್ರಾಸ್ ಬಳಿ ನಡೆದಿದೆ
ಮೃತರನ್ನು ಸಾಕ್ಷಿ,(7), ಮಾರುತಪ್ಪ, (45), ವೆಂಕಟೇಶ, (30) ವರ್ಷ, ಗವಿಸಿದ್ದಪ್ಪ, (28) ಎಂದು ತಿಳಿದುಬಂದಿದೆ. ಮೃತರೆಲ್ಲರೂ ಕೊಪ್ಪಳದ ಕುಕ್ಕನೂರು ನಗರದ ನಿವಾಸಿಗಳಾಗಿದ್ದಾರೆ.ಘಟನೆಯಲ್ಲಿ ಶ್ರೀನಿವಾಸ್, ಪ್ರವೀಣ್ ಕುಮಾರ್, ರಾಜಪ್ಪ, ಹುಲಿಗಪ್ಪ, ರಾಕೇಶ್, ತಿರುಪತಿ, ಶ್ರೀನಿವಾಸ್ ಗಾಯಗೊಂಡಿದ್ದಾರೆ.
ಕ್ರೂಸರ್ ಬೆಂಗಳೂರು ಕಡೆಯಿಂದ ಕೊಪ್ಪಳದ ಕಡೆ ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ನಲ್ಲಿದ್ದಂತಹ ನಾಲ್ವರು ಸಾವನ್ನಪ್ಪಿದ್ದಾರೆ.ಮೃತ ದೇಹಗಳನ್ನ ತುಮಕೂರಿನ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಗಾಯಗೊಂಡ 7 ಮಂದಿಯನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.


