ತುಮಕೂರು : ಮುಂದೆ ಹೋಗುತ್ತಿದ್ದಂತಹ ಟ್ರಾಕ್ಟರ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಾಲ್ಲೂಕಿನ ಓಬಳಾಪುರ ಗೇಟ್ ಬಳಿ ನಡೆದಿದೆ. ಮೃತರನ್ನು ಮಹಮದ್ ಆಸೀಫ್ 12 ವರ್ಷ, ಮಮ್ತಾಜ್ 38 ವರ್ಷ, ಶಾಖೀರ್ ಹುಸೇನ್ 48 ವರ್ಷ ಎಂದು ತಿಳಿದಿದೆ.
ಕೊರಟಗೆರೆ ರಸ್ತೆಯ ಓಬಳಾಪುರ ಗೇಟ್ ಬಳಿ ಬೆಳಗ್ಗೆ 6: 30ರ ಸಂದರ್ಭದಲ್ಲಿ ಟ್ರಾಕ್ಟರ್ ನ ಟ್ರೈಲರ್ ಗೆ ಗುದ್ದಿದ ಪರಿಣಾಮ ಈ ಘಟನೆ ನಡೆದಿದೆ.ಮೃತರು, ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಗುಡ್ಡೇಹಳ್ಳಿ ಮೂಲದವರು ಎನ್ನಲಾಗಿದೆ.
ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಎಸ್ಪಿ ಅಶೋಕ್, ಡಿವೈಎಸ್‌ಪಿ ಚಂದ್ರಶೇಖರ್ ಹಾಗೂ ಗ್ರಾಮಾಂತರ ಇನ್ಸ್‌ಪೆಕ್ಟರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.


