ತಲಪಾಡಿ : ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 300 ವರ್ಷಗಳಿಂದ ಖಾಲಿ ಬಿದ್ದಿದ್ದ ಮೈದಾನ ಕಲ್ಲು ಕ್ವಾರಿ ಮಾಲೀಕರ ಕಣ್ಣು ಕುಕ್ಕಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಹೋರಾಟಕ್ಕೆ ಧುಮುಕಿದ್ದು ಆರಂಭಿಕ ಗೆಲುವು ಲಭಿಸಿದೆ ಎಂದು ತಿಳಿಸಿದ್ದಾರೆ.
ಕೇರಳದ ರಾಜ್ಯದ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿರುವ ಪುರುಷನಕೋಡಿಯ ಕುಂಟಪದವು (ಮಲನಾಡ್ ರಸ್ತೆ) ಸುನ್ನೀ ಸೆಂಟರ್ ಬಳಿಯ ರಸ್ತೆಬದಿ ಇದೆ ಸುಮಾರು 300 ವರ್ಷಗಳ ಹಿಂದಿನ 2.25 ಎಕರೆ ಮೈದಾನದಲ್ಲಿ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿತ್ತು. ಆದರೆ 15 ದಿನಗಳ ಹಿಂದೆ ಈ ಮೈದಾನದ ಒಂದು ಬದಿಯಲ್ಲಿ ಹಸಿರು ಬಣ್ಣದ ಹೊದಿಕೆ ಅಳವಡಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ವಿಚಾರಿಸಿದಾಗ ಕಲ್ಲಿನ ಕ್ವಾರಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.
ಒಂದು ವೇಳೆ ಇಲ್ಲಿ ಕ್ವಾರಿ ಆದಲ್ಲಿ ಮೈದಾನವೂ ವಿರೂಪಗೊಳ್ಳುವ ಜೊತೆಗೆ ಕ್ವಾರಿಯಲ್ಲಿ ಮಳೆಗಾಲದಲ್ಲಿ ನೀರು ನಿಂತರೆ ಸ್ಥಳೀಯರಿಗೆ ಮಕ್ಕಳನ್ನು ನಿಯಂತ್ರಿಸುವುದೇ ಸವಾಲಾಗಿ ಕಾಡಲಿದೆ ಎನ್ನುವ ಆತಂಕ ಸ್ಥಳೀಯರದ್ದಾಗಿದೆ. ಈ ಹಿನ್ನೆಲೆಯಲ್ಲಿ ಮೈದಾನ ಉಳಿಸಲು ಮುಂದಾಗಿರುವ ಅಬ್ದುಲ್ ಹಮೀದ್ ಎಂಬವರು ಕಾಸರಗೋಡು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಕ್ವಾರಿ ನಿರ್ಮಾಣಕ್ಕೆ ತಡೆ ಹೇರಿದ್ದಾರೆ. ಈ ಮೈದಾನ ಯಾರಿಗೆ ಸೇರಿದೆ ಎನ್ನುವುದೇ ಗೊತ್ತಿಲ್ಲ. ಆದರೆ ಇಲ್ಲಿ ರೂಪಿಸಲಾಗಿದೆ.
ವರ್ಕಾಡಿ ಪಂಚಾಯತ್ ಉಪಾಧ್ಯಕ್ಷರಾದ ಸಿದ್ದೀಕ್ ರವರು ಸದಸ್ಯರಾಗಿರುವ ನಾಲ್ಕನೇ ಪಾವಲ ವಾರ್ಡಿನ ಪುರುಷಂಗೋಡಿನಲ್ಲಿ ಅನಧಿಕೃತವಾಗಿ ಕಲ್ಲಿನ ಕೋರೆ ನಿರ್ಮಿಸುತ್ತಿರು ವುದು ಗಮನಕ್ಕೆ ಬಂದಿದ್ದು ಈ ಜಾಗಕ್ಕೆ ಬಹಳಷ್ಟು ಲಕ್ಷ ಮೊತ್ತವನ್ನು ನೀಡಿ ಇಲ್ಲಿ ಕಲ್ಲಿನ ಕೋರೆ ನಡೆಸಲು ಮುಂದಾಗಿದ್ದಾರೆ ಎಂದು ಜಿಲ್ಲಾ ಕಲೆಕ್ಟರ್ ಸಮೇತ ಜಿಯೋಲಜಿ ವಿಭಾಗಕ್ಕೆ ಇದನ್ನು ತಡೆ ಮಾಡಿ ಇದರ ಬಗ್ಗೆ ಅನ್ವೇಷಣೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಜರಗಿಸುವಂತೆ ಕೋರಲಾಗಿದೆ. ಅದಲ್ಲದೇ ಇದಕ್ಕೆ ಪಂಚಾಯತ್ ಹಾಗು ಸಂಭಂದ ಪಟ್ಟ ಇಲಾಖೆಯಿಂದ NOC ನೀಡಲಾಗಿದೆಯೆ ಎಂದು ಈ ಅನ್ವೇಷಣೆಯಲ್ಲಿ ತಿಳಿಯಲಿದೆ . ಊರಿನ ಸಮಸ್ತ ಜನರನ್ನು ಒಳಪಡಿಸಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದರೆಂದು ಆಕ್ರೋಶ ಹೊರಹಾಕಿದ್ದಾರೆ.


