Friday, January 16, 2026
Flats for sale
Homeವಿದೇಶಢಾಕಾ : ಬಾಂಗ್ಲಾದಲ್ಲಿ ಮತ್ತೆ ಹಿಂದೂವಿನ ಕೊಲೆ, ಸಜೀವವಾಗಿ ಸುಡಲು ಯತ್ನಿಸಿದ್ದ ದುಷ್ಕರ್ಮಿಗಳು,ನದಿಗೆ ಹಾರಿ ಪಾರಾಗಿದ್ದಾತ...

ಢಾಕಾ : ಬಾಂಗ್ಲಾದಲ್ಲಿ ಮತ್ತೆ ಹಿಂದೂವಿನ ಕೊಲೆ, ಸಜೀವವಾಗಿ ಸುಡಲು ಯತ್ನಿಸಿದ್ದ ದುಷ್ಕರ್ಮಿಗಳು,ನದಿಗೆ ಹಾರಿ ಪಾರಾಗಿದ್ದಾತ ಆಸ್ಪತ್ರೆಯಲ್ಲಿ ಸಾವು.

ಢಾಕಾ : ಬಾಂಗ್ಲಾದೇಶದಲ್ಲಿ ಕಳೆದ ಮೂರು ವಾರಗಳಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. 4 ದಿನಗಳ ಹಿಂದಷ್ಟೇ ದುಷ್ಕರ್ಮಿಗಳ ದಾಳಿಯಿಂದ ಪಾರಾಗಿದ್ದ ಹಿಂದೂ ವ್ಯಕ್ತಿ ಖೋಕನ್ ಚಂದ್ರ ಚಿಕಿತ್ಸೆ ಫಲಕಾರಿಯಾಗದೆ ಢಾಕಾ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.

ಢಾಕಾದಿಂದ 150 ಕಿ.ಮೀ ದೂರದಲ್ಲಿ ರುವ ಶರಿಯಾತ್ಪುರ ಜಿಲ್ಲೆಯೊಂದರ ಗ್ರಾಮದಲ್ಲಿ ಫಾರ್ಮಸಿ ನಡೆಸುತ್ತಿದ್ದ ಖೋಕನ್ ದಾಸ್ ಬುಧವಾರ ರಾತ್ರಿ ೯ ಗಂಟೆಗೆ ಅಂಗಡಿ ಮುಚ್ಚಿ ಕೊಂಡು ಮನೆಗೆ ಬರುತ್ತಿರುವಾಗ ಕೇರುಭಾಗ್ ಬಜಾರ್ ಪ್ರದೇಶದಲ್ಲಿ ಕಿಡಿಗೇಡಿಗಳು ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಜೀವಂತ ಸುಡಲೆತ್ನಿಸಿದ್ದರು. ಅಲ್ಲೇ ಹತ್ತಿರವಿದ್ದ ಕೆರೆಗೆ ನೆಗೆದು ಖೋಕನ್ ಪವಾಡಸದೃಷವಾಗಿ ಪಾರಾಗಿ ದ್ದರು. ಆ ಬಳಿಕ ಸ್ಥಳೀಯ ಅವರನ್ನು ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಖೋಕನ್ ಆರೋಗ್ಯ ಸ್ಥಿತಿ ಗಂಭೀರ ವಾಗಿರುವ ಹಿನ್ನೆಲೆಯಲ್ಲಿ ಢಾಕಾ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು

ನನ್ನ ಪತಿ ಯಾರ ತಂಟೆಗೂ ಹೋದವರಲ್ಲ, ಆದ್ರೂ ದಾಳಿ ಮಾಡಿದೆಕ್ಕೆ : ಪತ್ನಿ ಮೂರು ದಿನಗಳ ಜೀವನ್ಮರಣ ಹೋರಾಟದ ಬಳಿಕ ನನ್ನ ಪತಿ ಶನಿವಾರ ನಿಧನರಾದರು. ಅವರು ಯಾರ ತಂಟೆಗೂ ಹೋದವರಲ್ಲ. ಅಂಥವರ ಮೇಲೆ ಯಾಕೆ ಹಲ್ಲೆ ನಡೆಸಿದರು ಎಂಬುದೇ ಇನ್ನೂ ತಿಳಿಯುತ್ತಿಲ್ಲ.
ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮೃತ ಹಿಂದೂ ವ್ಯಕ್ತಿ ಖೋಕನ್ ಅವರ ಪತ್ನಿ ಸೀಮಾದಾಸ್ ದುಃಖ ತೋಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular