Wednesday, April 1, 2026
Flats for sale
Homeವಿದೇಶಟೆಹ್ರಾನ್ : ಇರಾನ್‌ನ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರ- ಮಿಲಿಟರಿ ಕೇಂದ್ರದ ಮೇಲೆ 907 ಕೇಜಿ ಬಂಕರ್...

ಟೆಹ್ರಾನ್ : ಇರಾನ್‌ನ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರ- ಮಿಲಿಟರಿ ಕೇಂದ್ರದ ಮೇಲೆ 907 ಕೇಜಿ ಬಂಕರ್ ಬಸ್ಟರ್ ಬಾಂಬ್‌ ಬಳಸಿ ಅಮೇರಿಕಾ ದಾಳಿ, ಅಣು ಕೇಂದ್ರ, ಸೇನೆ ನೆಲೆ ಧ್ವಂಸ.

ಟೆಹ್ರಾನ್ : ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್‌ನ ಇಸ್ಫಹಾನ್‌ನಲ್ಲಿರುವ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರ ಮತ್ತು ಮಿಲಿಟರಿ ಕೇಂದ್ರದ ಮೇಲೆ ೯೦೭ ಕೇಜಿ ಬಂಕರ್ ಬಸ್ಟರ್ ಬಾಂಬ್‌ಗಳ ಮೂಲಕ ಅಮೆರಿಕ ದಾಳಿ ನಡೆಸಿದೆ.

ಈ ಸ್ಫೋಟದ ವಿಡಿಯೋ ಗಳನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಸಾಮಾಜಿಕ ತಾಣದಲ್ಲಿ ಹಂಚಿಕೊAಡಿದ್ದಾರೆ. ವರದಿಗಳ ಪ್ರಕಾರ, ಮಂಗಳವಾರ ಬೆಳಗಿನ ಜಾವ ಇಸ್ಫಹಾನ್ ನಗರದ ಮೇಲೆ ದಾಳಿ ನಡೆಸಲಾಗಿದೆ. ಈ ನಗರದಲ್ಲಿ ಇರಾನ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರ ಮತ್ತು ಕ್ಷಿಪಣಿ ಸಂಗ್ರಹಾಗಾರಗಳಿವೆ. ಹೀಗಾಗಿ ಭೂಮಿಯ ಆಳದಲ್ಲಿರುವ ಭದ್ರ ಕೋಟೆಯನ್ನು ನಾಶಪಡಿಸಲು ಅಮೆರಿಕ ಬಂಕರ್ ಬಸ್ಟರ್ ಬಾಂಬ್ ಮೂಲಕ ದಾಳಿ ನಡೆಸಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಇಸ್ರೇಲ್ ಸೇನೆಯೂ ಭಾಗಿಯಾಗಿದ್ದು, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ. ಸೋಮ ವಾರವಷ್ಟೇ ಅಮೆರಿಕ ಅಧ್ಯಕ್ಷ ಟ್ರಂಪ್ ಶೀಘ್ರ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್‌ನ ಪರಮಾಣು ಕೇಂದ್ರ, ಇAಧನ ಮೂಲ, ನೀರು ಸರಬರಾಜು ಘಟಕ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆ ಮೇಲೆ ದಾಳಿಮಾಡುತ್ತೇವೆ ಎಂದು ಕೊನೆಯ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಅಮೆರಿಕ-ಇಸ್ರೇಲ್ ಇರಾನ್ ಮೇಲೆ ಭೀಕರ ಜಂಟಿ ದಾಳಿ ನಡೆಸಿವೆ. ಇರಾನ್ ಅಮೆರಿಕದ ಈ ದಾಳಿಯನ್ನು ಖಂಡಿಸಿದ್ದು ಶತ್ರುಗಳ ವಿರುದ್ಧ ಪ್ರತೀ ಕಾರ ತಿರಿಸಿಕೊಳ್ಳುವ ಶಪಥ ಮಾಡಿದೆ.

ಹೊರ್ಮುಜ್ ತೆರೆಸದೇ ಟ್ರಂಪ್ ಯುದ್ಧ ಅಂತ್ಯ?
ಹೊರ್ಮುಜ್ ಜಲಸಂಧಿಯಲ್ಲಿ ನಿರ್ಬಂಧ ಮುAದುವರಿದರೂ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಕಾರ್ಯಾ ಚರಣೆಗೆ ನಿಗದಿಪಡಿಸಿದ್ದ ನಾಲ್ಕು ವಾರಗಳ ಕಾಲಮಿತಿಯನ್ನು ಆರು ವಾರಗಳಿಗೆ ವಿಸ್ತರಿಸ ಬಹುದೇ ಎಂದು ಟ್ರಂಪ್ ಮತ್ತವರ ಸಹಾಯಕರು ಇತ್ತೀಚೆಗೆ ಪರಾಮರ್ಶೆ ನಡೆಸಿದ್ದರು.

ಸದ್ಯದಲ್ಲಿ ಯುದ್ಧ ನಿಲ್ಲುವ ವಾತಾವರಣ ಕಂಡು ಬರದ ಕಾರಣ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ
ಒಂದು ಬ್ಯಾರೆಲ್ ಕಚ್ಚಾ ತೈಲ ಬೆಲೆ 114 ಡಾಲರ್‌ಗೆ ಏರಿಕೆಯಾಗಿದೆ. ಇದು ಹೀಗೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 150-2೦೦ ಡಾಲರ್‌ಗೆ ಏರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಈ ಪರಿಸ್ಥಿತಿ ಬಂದೊದಗಿದರೆ ತೈಲಕ್ಕಾಗಿ ಭಾರಿ ಹಾಹಾಕಾರ ಉಂಟಾಗಲಿದ್ದು, ಅನೇಕ ದೇಶಗಳಿಗೆ ತೊಂದರೆಯಾಗಲಿದೆ. ಇರಾನ್‌ನ ಪರಮಾಣು ಕೇಂದ್ರಗಳ ಮೇಲಿನ ಈ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಇದರ ಪರಿಣಾಮ ಬೀರಿದೆ.

ಇಸ್ಫಹಾನ್ ಯಾಕೆ ಟಾರ್ಗೆಟ್?: ಇಸ್ಫಹಾನ್ ನಗರ ಇರಾನ್‌ನ ರಕ್ಷಣಾ ಉದ್ಯಮದ ಕೇಂದ್ರ ಬಿಂದು ಎಂದು ಹೇಳಲಾಗುತ್ತದೆ. ಇದೇ ನಗರದಲ್ಲಿ ಪರಮಾಣು ಸಂಶೋಧನೆ ಕೇಂದ್ರ ಹಾಗೂ ನೌಕಾಪಡೆ, ಕ್ಷಿಪಣಿ ತಂತ್ರಜ್ಞಾನದ ಬಹುಪಾಲು ಇಲ್ಲಿಯೇ ಇದೆ. ಹೀಗಾಹಿ ಇರಾನ್‌ನ ಪರಮಾಣು ಕೇಂದ್ರ, ಶಸ್ತಾçಸ್ತç ಸಂಗ್ರಾಹಾರ ಗುರಿಯಾಗಿಸಿಕೊಂಡು ಅಮೆರಿಕ-ಇಸ್ರೇಲ್ ದಾಳಿ ನಡೆಸಿದೆ.

ಭೂಮಿ ಒಳಗೇ ನುಗ್ಗುವ ಬಾಂಬ್: ಶತ್ರುಗಳ ಸುರಕ್ಷಿತ ತಾಣ ಬಂಕರ್‌ಗಳನ್ನು ಧ್ವಂಸಗೊಳಿಸಲು ಈ ಬಂಕರ್ ಬ್ಲಸ್ಟರ್ ಬಾಂಬ್ ಬಳಸಲಾಗುತ್ತದೆ. ಸಾಮಾನ್ಯ ಬಾಂಬ್‌ಗಳು ಭೂಮಿಗೆ ಅಪ್ಪಳಿಸಿದ ತಕ್ಷಣ ಸ್ಫೋಟಗೊಳ್ಳುತ್ತವೆ. ಆದರೆ ಬಂಕರ್ ಬಸ್ಟರ್‌ಗಳ ಕಾರ್ಯವೈಖರಿಯೇ ಬೇರೆ. ಇವು ಮೊದಲು ಕಾಂಕ್ರೀಟ್ ಗೋಡೆ ಅಥವಾ ಗಟ್ಟಿ ನೆಲವನ್ನು ಕೊರೆದು ಒಳಗೆ ನುಗ್ಗುತ್ತವೆ. ನಿರ್ದಿಷ್ಟ ಆಳವನ್ನು ತಲುಪಿದ ನಂತರವಷ್ಟೇ ಇವು ಸ್ಫೋಟಗೊಳ್ಳುತ್ತವೆ. ಅಂದರೆ, ಶತ್ರುಗಳ ನೆಲದಡಿಯ ರಹಸ್ಯ ಅಡಗುದಾಣಗಳನ್ನೇ ಸಮಾಧಿ ಮಾಡುವ ಶಕ್ತಿ ಬಂಕರ್ ಬಸ್ಟರ್‌ಗೆ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular