ಟೆಹರಾನ್ : ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಕದನಕ್ಕಿಳಿದಿರುವ ಇರಾನ್, ಅತ್ತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯತ್ರಯರ ನಡುವಣ ಸಂಧಾನ ಮಾತುಕತೆಯನ್ನೂ ನಿರಾಕರಿಸಿಲ್ಲ. ಬದಲಾಗಿ ನಾವು ಸಂಧಾನ ಚರ್ಚೆಗೆ ಸಿದ್ಧವಾಗೇ ಇದ್ದೇವೆ ಎಂದು ಹೇಳಿದೆ.
ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯ ಮಾತುಕತೆಯನ್ನು ಇರಾನ್ ಎಂದಿಗೂ ನಿರಾಕರಿಸಿಲ್ಲ ಎಂದು ಆ ದೇಶದ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನದ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ನಾವು ಇಸ್ಲಾಮಾಬಾದ್ಗೆ ಹೋಗಲು ಯಾವತ್ತೂ ನಿರಾಕರಿಸಿಲ್ಲ. ಇರಾನ್ ನಿಲುವನ್ನು ಅಮೆರಿಕ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ದೂಷಿಸಿದ್ದಾರೆ.
ನಮ್ಮ ಮೇಲೆ ಹೇರಲಾದ ಅಕ್ರಮ ಯುದ್ಧವನ್ನು ಶಾಶ್ವತ ಹಾಗೂ ನಿರ್ಣಾಯಕವಾಗಿ ಅಂತ್ಯಗೊಳಿಸುವ ನಿಯಮ, ನಿಬಂಧನೆಗಳ ಬಗ್ಗೆ ಮಾತ್ರ ನಾವು ಕಾಳಜಿ ವಹಿಸುತ್ತೇವೆ ಎಂದಿದ್ದಾರೆ. ಈ ಸಂಧಾನ ಮಾತುಕತೆಯಲ್ಲಿ ಕೆಲವೊಂದು ರೀತಿಯ ಪ್ರಗತಿ ಸಾಧಿಸಿದ್ದರೂ ಇರಾನ್ ಕಡೆಯಿಂದ ಪ್ರತಿಕ್ರಿಯೆ ಇಲ್ಲದ ಕಾರಣ ಈ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಪಾಕಿಸ್ತಾನದ ಡಾನ್ ಹಾಗೂ ಅಮೆರಿಕದ ವಾಲ್ ಸ್ಟಿçÃಟ್ ಜರ್ನಲ್ ವರದಿ ಮಾಡಿದ ಹಿನ್ನೆಲೆಯಲ್ಲಿ ಅರಾಘ್ಚಿ ಮೇಲಿನ ಪ್ರತಿಕ್ರಿಯೆ ನೀಡಿದರು. ಇದೊಂದು ಆಧಾರರಹಿತ ಹಾಗೂ ಕಪೋಲಕಲ್ಪಿತ ವರದಿ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಅಂದ್ರಾಬಿ ಕೂಡ ಮಾಧ್ಯಮ ವರದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇರಾನ್ನಲ್ಲಿ ಅಮೆರಿಕದ ಯುದ್ಧ ವಿಮಾನ ಪತನಗೊಂಡ ಸುದ್ದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೂ ಇದು ಅಮೆರಿಕ ಇರಾನಿನ ಶಾಂತಿ ಮಾತುಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಮೆರಿಕ ಶಾಂತಿ ಒಪ್ಪAದದಲ್ಲಿ ಆಸಕ್ತಿ ಹೊಂದಿದೆ ಎAದವರು ಸೂಚಿಸಿದ್ದಾರೆ. ಇರಾನ್ನಲ್ಲಿ ಅಮೆರಿಕದ ಯುದ್ಧ ವಿಮಾನವೊಂದು ನಾಶವಾಗಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅವರು ಒಪ್ಪಿಕೊಂಡಿರುವುದು ಇದೇ ಮೊದಲ ಸಲ ಎನ್ನವುದು ಗಮನಾರ್ಹ


