ಜಿನೇವಾ : ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆಯು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ “ರೆಡ್ ಅಲರ್ಟ್” ಎಂದು ಸೂಚಿಸಿದ್ದು ,ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳು ಮತ್ತು ಸಮುದ್ರದಲ್ಲಿನ ನೀರ್ಗಲ್ಲು ಕುಸಿತ ಏರಿಕೆ, ಭೂಮಿ, ನೀರಿನ ಉಷ್ಣಾಂಶ ಹೆಚ್ಚಳವು ಆತಂಕಕಾರಿ ಮಟ್ಟ ತಲುಪಿದ್ದು ಭೂಮಿ ಅಪಾಯದ ಅಂಚಿನಲ್ಲಿದೆ ಎಂದು ತಿಳಿಸಿದೆ.
ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ 2024 ಮತ್ತೊಂದು ದಾಖಲೆಯ ಬಿಸಿ ವರ್ಷವಾಗುವ “ಹೆಚ್ಚಿನ ಸಂಭವನೀಯತೆ” ಇದೆ ಎಂದು ಹೇಳಿದೆ. “2023ನೇ ವರ್ಷ, ಉಷ್ಣಾಂಶ ದಾಖಲು ಆರಂಭವಾದ ಬಳಿಕ ಅತ್ಯಂತ ಉಷ್ಣತೆಯ ಮತ್ತು 2023ಕ್ಕೆ ಕೊನೆಗೊಂಡ ದಶಕವು, ಇತಿಹಾಸದಲ್ಲೇ ಅತ್ಯಂತ ಉಷ್ಣಾಂ ದಾಖಲಿಸಿದ ದಶಕವಾಗಿ ಹೊರಹೊಮ್ಮಿದೆ.ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗ್ಯುಟೆರಸ್, ಈ ಕುರಿತ ವರದಿ ಬಿಡುಗಡೆ ಮಾಡಿದ್ದಾರೆ.
ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆಯ ಪ್ರಕಾರ, 2023ರಲ್ಲಿ ಸರಾಸರಿ ತಾಪಮಾನ ಏರಿಕೆ 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು ಇದು ಅತಿ ಆತಂಕಕ್ಕೆ ಕಾರಣವಾಗಿದೆ. 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ 1.5 ಡಿಗ್ರಿ ಸೆಲ್ಸಿಯಸ್ಗಿಂತ ಮಿತಿಗಿಂತ ಕೊಂಚವೇ ಕಡಿಮೆಯಾಗಿದೆ ಎಂದು ಇದು ಭೂಮಿ ಅತ್ಯಂತ ಅಪಾಯದ ಅಂಚಿನಲ್ಲಿದೆ ಎಂಬುದನ್ನು ತೋರಿಸುತ್ತದೆ’ ತಿಳಿಸಿದೆ.


