Friday, November 22, 2024
Flats for sale
Homeಜಿಲ್ಲೆಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ : ಸೇವೆಯಿಂದ ವೈದ್ಯ ವಜಾ.

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ : ಸೇವೆಯಿಂದ ವೈದ್ಯ ವಜಾ.

ಚಿತ್ರದುರ್ಗ: ಕಾಲ ಬದಲಾದಂಗೆ ಎಲ್ಲಾನು ಬದಲಾಗೋತ್ತೇ ಎಂಬುದು ನಿಜವಾದ ಮಾತು ಮೊದಲಿನ ಕಾಲದ ಮದುಮಕ್ಕಳಿಗೆ ಇಂತಹ ಶೂಟಿಂಗ್ ಏನು ಇರಲಿಲ್ಲ ಆದರೆ ಈಗಿನ ಜನರಿಗೆ ಎಲ್ಲಿ ಏನು ಮಾಡಬೇಕು ಎಂಬುದು ತಿಳಿಯೋದೇ ಇಲ್ಲದಂತಾಗಿದೆ .ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ತಾಲೂಕಿನ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಘಟಕ ಬಳಸಿಕೊಂಡ ಪ್ರಕರಣಕ್ಕೆ ನಿಯಮ ಬಾಹಿರ ಕೃತ್ಯ, ಕರ್ತವ್ಯ ಲೋಪ ಸಂಬಂಧಿಸಿದಂತೆ ಇಲ್ಲಿನ ಹೊರಗುತ್ತಿಗೆ ವೈದ್ಯ ಡಾ. ಅಬಿಷೇಕ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಅಭಿಷೇಕ್ ಅವರು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಳೆದ ಫೆ 07 ರಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಪರೇಷನ್ ನಾಗಪ್ಪ’ ಶೀರ್ಷಿಕೆಯಡಿ ವ್ಯಕ್ತಿಗೆ ಆಪರೇಷನ್ ಮಾಡುತ್ತಿರುವಂತೆ ಆಪರೇಷನ್ ಥಿಯೇಟರ್​​ನಲ್ಲಿ ಶೂಟಿಂಗ್ ಮಾಡುತಿದ್ದರು . ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್​ ಆಗಿದೆ. ಜೊತೆಗೆ ಡಾ.ಅಭಿಷೇಕ್ ಜೋಡಿ ಬಗ್ಗೆ ಟೀಕೆ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಗಳಿರುವುದು ಜನರ ಆರೋಗ್ಯ ಸೇವೆಗೆ ಹೊರತು ವೈಯಕ್ತಿಕ ಕೆಲಸಗಳಿಗಲ್ಲ. ವೈದ್ಯರಿಂದ ಇಂಥಹ ಅಶಿಸ್ತುಗಳನ್ನ ನಾನು ಸಹಿಸುವುದಿಲ್ಲ ಎಂದು ಸಚಿವ ದಿನೇಶ್​ ಗುಂಡೂರಾವ್ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular