ಚಿತ್ರದುರ್ಗ : ಡಿ ಗ್ಯಾಂಗ್ ನಿಂದ ಹತ್ಯೆಗೀಡಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮಗನ ನಾಮಕರಣ ಶಾಸ್ತ್ರ ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿನ ರೇಣುಕಾಸ್ವಾಮಿ ನಿವಾಸದಲ್ಲಿ ಇಂದು ನಡೆಯಲಿದೆ.
ಮಗುವಿಗೆ 5 ತಿಂಗಳು ತುಂಬಿದ ಹಿನ್ನೆಲೆ ನಾಮಕರಣ ಶಾಸ್ತ್ರ ನಡೆಯಲಿದ್ದು ನಾಮಕರಣ ಹಿನ್ನೆಲೆ ಮನೆಯಲ್ಲಿ ಸಂಭ್ರಮಮೂಡಿದೆ. ಸ್ವತಃ ಮನೆಯ ಬಾಗಿಲಿಗೆ ರೇಣುಕಾ ಸ್ವಾಮಿ ತಂದೆ ಕಾಶೀನಾಥ ಶಿವನಗೌಡರು ಹೂ ಹಾರ ಕಟ್ಟುತ್ತಿದ್ದು ತೊಟ್ಟಿಲುಶಾಸ್ತ್ರಕ್ಕೆ ಮನೆಯವರು ಬಾರದ ಸಿದ್ಧತೆ ಮಾಡಿಕೊಳ್ಳುತ್ತಿರುದ್ದಾರೆ.
ಸಧ್ಯ ದಾವಣಗೆರೆಯ ಹರಿಹರದಲ್ಲಿ ರೇಣುಕಾಸ್ವಾಮಿ ಪತ್ನಿ ಸಹನಾ ಹಾಗೂ ಮಗು ನೆಲೆಸಿದ್ದು ತೊಟ್ಟಿಲು ಶಾಸ್ತ್ರ ಹಿನ್ನೆಲೆ ರೇಣುಕಾಸ್ವಾಮಿ ಪತ್ನಿ ಸಹನಾ ಮನೆಗೆ ಬರಲಿದ್ದಾರೆ.ಮೊಮ್ಮಗ- ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಕಾತರರಾದ ಕುಟುಂಬ ಇದ್ದು ರೇಣುಕಾಸ್ವಾಮಿ ನಿವಾಸದಲ್ಲಿ ಇನ್ನಿಲ್ಲದ ಸಂಭ್ರಮ ನಡೆಯಲಿದೆ . ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ, ತಾಯಿ ರತ್ನಪ್ರಭ ಮುಖದಲ್ಲಿ ಸಂಭ್ರಮ ನಗೆಬೀರಿದೆ .ಒಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ನ ರಂಪಾಟದಲ್ಲಿ ಜನಿಸುವ ಮೊದಲೇ ಅಪ್ಪ ಎನ್ನುವ ಶಬ್ದವನ್ನು ಮಗು ಕೆಳೆದುಕೊಂಡಿರುವುದು ಬೇಸರದ ಸಂಗತಿ.