Friday, March 13, 2026
Flats for sale
Homeರಾಜ್ಯಚಿತ್ರದುರ್ಗ : ದರ್ಶನ್ ಕೊಲೆಗೈದು ಮೃತಪಟ್ಟ ರೇಣುಕಾಸ್ವಾಮಿಗೆ ಗಂಡು ಮಗು ಜನನ.!

ಚಿತ್ರದುರ್ಗ : ದರ್ಶನ್ ಕೊಲೆಗೈದು ಮೃತಪಟ್ಟ ರೇಣುಕಾಸ್ವಾಮಿಗೆ ಗಂಡು ಮಗು ಜನನ.!

ಚಿತ್ರದುರ್ಗ : ದರ್ಶನ್ ಕೊಲೆಗೈದ ರೇಣುಕಾಸ್ವಾಮಿಗೆ ಗಂಡುಮಗು ಹುಟ್ಟಿದ್ದು ಮತ್ತೆ ಹುಟ್ಟಿಬಂದ ಮರಿ ರೇಣುಕಾಸ್ವಾಮಿ ಎಂದು ಸಂತಸದಲ್ಲಿ ಕುಟುಂಬಸ್ಥರು ಮಾತಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ಸಹನಾ ರವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಇಂದು ಮುಂಜಾನೆ 6:55ಕ್ಕೆ ಸಹಜ ಹೆರಿಗೆ ಆಗಿದ್ದು ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ,ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ,36 ವಾರಗಳಿಗೆ ಪ್ರೀ ಮೆಚ್ಯುವರ್ ಹೆರಿಗೆ ಆದ ಹಿನ್ನೆಲೆ ಚಿಕಿತ್ಸೆ ನೀಡಲಾಗುತ್ತಿದೆ, ಸಧ್ಯ ತಾಯಿ ಹಾಗೂ ಮಗು ಚೆನ್ನಾಗಿದ್ದು, ಸಹನಾ ಕೆಲ ಮಾನಸಿಕವಾಗಿ ನೊಂದಿದ ಹಿನ್ನೆಲೆ ಮಗುವಿನ ತೂಕ ಕಡಿಮೆ ಆಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ.

ಮೆಡಿಕಲ್ ಆಗಿ ಏನೇನು ಮಾಡಬೇಕೋ ಅದೆಲ್ಲಾ‌ ಮಾಡಿದ್ದು ಹಾಗಾಗಿ ಸಹಜವಾಗಿ ಹೆರಿಗೆ ಆಗಿದೆ ಎಂದು ಹೇಳಿದ್ದಾರೆ.ಮೂರ್ನಾಲ್ಕು ದಿನ ಮಗುವಿನ ಆರೋಗ್ಯ ನಿಗಾ ಇರಿಸಿ, ನಂತರ ಡಿಸ್ಚಾರ್ಜ್ ಮಾಡ್ತೀವಿ ಸಹನಾ‌ ಮುಂಚೆಯಿಂದ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಬರುತಿದ್ದ ಹಿನ್ನೆಲೆ ಯಾವುದೇ ಚಾರ್ಜ ಇಲ್ಲದೇ ಉಚಿತವಾಗಿ ಹೆರಿಗೆ ಮಾಡಿಸಿದ್ದೇವೆ ಎಂದು ಚಿತ್ರದುರ್ಗದಲ್ಲಿ ಕೀರ್ತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿ.ಮಲ್ಲಿಕಾರ್ಜುನ್ ಹೇಳಿದ್ದಾರೆ.

ರೇಣುಕಾಸ್ವಾಮಿಗೆ ಗಂಡು ಮಗು ಜನನ ಹಿನ್ನೆಲೆ‌ ಆಸ್ಪತ್ರೆಯಲ್ಲಿ ಬಲೂನುಬಕಟ್ಟಿ ಸಂಭ್ರಮಾಚರಣೆ ಮಾಡಿದ್ದಾರೆ ನೀಲಿ ಬಲೂನಿಂದ ಆಸ್ಪತ್ರೆಯಲ್ಲಿನ ಸಹನಾ ಕೋಣೆಗೆ ಅಲಂಕಾರ ಮಾಡಿದ್ದೂ ಹೆಣ್ಣು ಮಗು ಹುಟ್ಟಿದ್ರೆ ಪಿಂಕ್ ಬಣ್ಣದ ಬಲೂನು,ಗಂಡು ಮಗು ಹುಟ್ಟಿದ್ರೆ ನೀಲಿ ಬಲೂನು ಕಟ್ಟಿ ಜೆಸಿಆರ್ ಬಡಾವಣೆಯ ಕೀರ್ತಿ ಆಸ್ಪತ್ರೆಯಾ ಸಿಬ್ಬಂದಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular