Sunday, March 15, 2026
Flats for sale
Homeರಾಜ್ಯಚಿತ್ರದುರ್ಗ : ಊಟ ಬೇಕು ಅಂತ ಅಳುತಿದ್ದ ಮಗುವನ್ನೇ ಗುದ್ದಿ ಕೊಂದ ಪಾಪಿ ತಂದೆ..!

ಚಿತ್ರದುರ್ಗ : ಊಟ ಬೇಕು ಅಂತ ಅಳುತಿದ್ದ ಮಗುವನ್ನೇ ಗುದ್ದಿ ಕೊಂದ ಪಾಪಿ ತಂದೆ..!

ಚಿತ್ರದುರ್ಗ : ಊಟ ಬೇಕು ಅಂತ ಅಳುತಿದ್ದ 6 ವರ್ಷದ ಮಗುವನ್ನು ಪಾಪಿ ತಂದೆ ಗುದ್ದಿ ಕೊಂದ ಘಟನೆ ಚಿತ್ರದುರ್ಗ ತಾಲೂಕಿನ ಹಳೆ ರಂಗಾಪುರ ಗ್ರಾಮದಲ್ಲಿ ನಡೆದಿದೆ.

6 ವರ್ಷದ ಮಂಜುನಾಥ(6) ಮೃತ ದುರ್ದೈವಿ ಮಗು.ತಿಪ್ಪೇಶ (35) ಸ್ವಂತ ಮಗನನ್ನೇ ಕೊಂದ ಪಾಪಿ ತಂದೆ .

ಪ್ರತಿನಿತ್ಯ ಕುಡಿದು ಪತ್ನಿ ಗೌರಮ್ಮಳನ್ನು ಪೀಡಿಸುತ್ತಿದ್ದ ತಿಪ್ಪೇಶ ಮಗು ಅನ್ನ ಬೇಕು ಅಂತಾ ಅತ್ತಿದ್ದಕ್ಕೆ ಎದೆ ಹಾಗೂ ಬೆನ್ನಿನ ಭಾಗಕ್ಕೆ ಕೈಯ್ಯಿಂದ ಗುದ್ದಿದ್ದಾನೆ.ಮೂರ್ಛೇ ಹೋಗಿದ್ದ ಮಗುವನ್ನು ತಾಯಿ ಗೌರಮ್ಮ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲೇ ಮಗು ಸಾವನಪ್ಪಿದೆ.

ಸಹೋದರ ಸಮುದಾಯದಲ್ಲಿ‌ ಪ್ರೀತಿಸಿ ಮದುವೆಯಾಗಿದ್ದ ತಿಪ್ಪೇಶ್-ಗೌರಮ್ಮ ದಂಪತಿಗಳಿಗೆ ಮಂಜುನಾಥ ಜನಿಸಿದ್ದನು,ಎರಡು ಎಕರೆ ಜಮೀನು ಕೊರಚರ ಪಾಲಾಗುತ್ತೆ ಅಂತ ಆಸ್ತಿ ಹೊಡೆಯಲು ತಿಪ್ಪೇಶ ಮಗುವನ್ನು ಕೊಲೆ‌ಮಾಡಿದ್ದಾನೆಂದು ಆರೋಪ ಕೇಳಿಬಂದಿದೆ.ಮುಗಿಲು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,ತಿಪ್ಪೇಶ ನನ್ನು ಎನ್ ಕೌಂಟರ್ ಮಾಡಿ ಅಂತಾ ಕುಟುಂಬಸ್ಥರು ಆಕ್ರೋಶಹೊರಹಾಕಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular