ಚಿತಾಪುರ : ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿ ಬೆಂಕಿ ಬೆಂಕಿ ತಗುಲಿದ ಪರಿಣಾಮವಾಗಿ ಇಬ್ಬರಿಗೆ ಗಂಭೀರವಾಗಿ ಗಾಯಗಳಾದ ಘಟನೆ ನಡೆದಿದೆ.
ತಾಲೂಕಿನ ಹೊಸ್ಸೂರ ಗ್ರಾಮದಲ್ಲಿ ರಾತ್ರಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಖಾಲಿ ಆಗಿದ್ದು ಅದನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ನಲ್ಲಿ ವಾಯ್ಸರ್ ಇಲ್ಲದೆ ಇದ್ದು ಗ್ಯಾಸ್ ಸೋರಿಕೆಗೊಂಡಿದ್ದು ಧಿಡೀರನೆ ಬೆಂಕಿ ಹತ್ತಿಕೊಂಡಿದ್ದೆ. ಅಡುಗೆ ಮನೆಯಲ್ಲಿದ್ದ ಭೀಮವ ಗಂಡ ಸಾಬಣ್ಣ ನಾಟಿಕಾರ್ ಅವರಿಗೆ ಬೆಂಕಿ ಆವರಿಸಿಕೊಡಿದನ್ನು ಕಂಡು ಅವರ ಮಗ ಮೋನಪ್ಪ ತಂದೆ ಸಾಬಣ್ಣ ನಾಟಿಕಾರ್ ಎನ್ನುವವರು ತಾಯಿಯನ್ನು ಹೊರತರಲು ಹೋದಾಗ ಅವರಿಗೂ ಕೂಡ ಬೆಂಕಿ ತಗುಲಿದ್ದು ದೇಹದ ಮೇಲೆ ಸುಟ್ಟ ಗಾಯಗಳಾಗಿದ್ದು ಸ್ಥಳಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಮನೆಯ ಛಾವಣಿಯ ಕಟ್ಟಿಗೆಗಳಿಗೂ ಬೆಂಕಿ ಆವರಿಸಿಕೊಡಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಂದಿಸಿದ್ದಾರೆ. ಅಗ್ನಿ ಅನಾಹುತದಲ್ಲಿ ಹಾನಿಯಾದ ಮನೆಗೆ ಮತ್ತು ಸುಟ್ಟು ಗಾಯಗಳಾದ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗಾಯಾಳುವಿನ ಸಂಬಂಧಿಕ ಶರಣಪ್ಪ ನಾಟೀಕರ್ ಮನವಿ ಮಾಡಿದ್ದಾರೆ.


