ಚಿಕ್ಕಮಗಳೂರು : ಕಳೆದ ಹಲವು ದಿನಗಳ ಹಿಂದೆ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದಿದ್ದು ನೆರೆ ನೀರು ಮನೆಗೆ ನುಗ್ಗಿ ಹಲವು ಪ್ರಾಣಹಾನಿಯಾಗಿದೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆ ಚಾರ್ಮಾಡಿ ಘಾಟ್ ಇದೀಗ ಕುಸಿದಿದೆ. ಬೆಂಗಳೂರಿನಿಂದ ದಕ್ಷಿಣ ಕನ್ನಡ, ಉಡುಪಿ ಭಾಗಗಳಿಗೆ ತೆರಳುವ ಮಂದಿ ಶಿರಾಡಿ ಮೂಲಕ ತೆರಳುತ್ತಿದ್ದರು. ಆದರೆ ಶಿರಾಡಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿತ್ತು ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆ ಇಂದು ಮತ್ತೆ ಗುಡ್ಡ ಕುಸಿದಿದೆ.
ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಗುಡ್ಡ ಮತ್ತು ಬಂಡೆಗಳು ಕುಸಿದಿದ್ದು ಮಳೆ ನೀರಿನ ಜೊತೆ ರಸ್ತೆಗೆ ಕಲ್ಲುಗಳು ತೇಲಿಕೊಂಡು ಬಂದಿವೆ. ವಾಹನ ಸಂಚಾರ ಎಂದಿನಂತೆ ಇದ್ದು ಯಾವುದೇ ತೊಂದರೆ ಇಲ್ಲ ಎಂದು ತಿಳಿದಿದೆ ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು ರಸ್ತೆಯಲ್ಲಿ ಅಡಿಗಟ್ಟಲೇ ನೀರು ಹರಿಯುತ್ತಿರುವ ಹಿನ್ನೆಲೆ ಮಣ್ಣಿನ ಸಾಂದ್ರತೆ ಕಡಿಮೆಯಾಗಿರುವುದಿಂದ ಗುಡ್ಡ ಕುಸಿದಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ಚಾರ್ಮಾಡಿ ಘಾಟಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


