Saturday, November 23, 2024
Flats for sale
Homeರಾಜ್ಯಚಿಕ್ಕಮಗಳೂರು : ನಿರ್ಬಂಧ ವಿಧಿಸಿದರೂ ಚಾರ್ಮಾಡಿ ಘಾಟ್ ಜಲಪಾತದಲ್ಲಿ ಮೋಜು ಮಸ್ತಿ : ಪ್ರವಾಸಿಗರ ಬಟ್ಟೆಗಳನ್ನು...

ಚಿಕ್ಕಮಗಳೂರು : ನಿರ್ಬಂಧ ವಿಧಿಸಿದರೂ ಚಾರ್ಮಾಡಿ ಘಾಟ್ ಜಲಪಾತದಲ್ಲಿ ಮೋಜು ಮಸ್ತಿ : ಪ್ರವಾಸಿಗರ ಬಟ್ಟೆಗಳನ್ನು ಹೊತ್ತೊಯ್ದ ಪೊಲೀಸ್ ಅಧಿಕಾರಿಗಳು.!

ಚಿಕ್ಕಮಗಳೂರು : ರಾಜ್ಯದಲ್ಲಿ ಕಳೆದ ಹಲವಾರು ದಿನಗಳಿಂದ ಸುರುಯುವ ಮಳೆಯಿಂದಾಗಿ ನದಿ ಸರೋವರ ಬೆಟ್ಟ ಗುಡ್ಡಗಳು ಹಚ್ಚಹಸಿರಿನಿಂದ ತುಂಬಿ ತುಳುಕುತ್ತಿದ್ದು ಪ್ರವಾಸಿಗರು ಹೆಚ್ಚಾಗುತ್ತಿರುವುದು ಕಂಡುಬಂದಿದೆ .ಜಲಪಾತಕ್ಕೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಆದರೂ ಕೆಲವು ಪ್ರವಾಸಿಗರು ಜಲಪಾತಕ್ಕೆ ಇಳಿಯುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ರಾಜ್ಯದಲ್ಲಿ ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಹಲವು ಸಾವು ನೋವು ಸಂಭವಿಸಿದೆ. ಸಂಬಂಧ ಪಟ್ಟ ಇಲಾಖೆ ಹೆಚ್ಚರಿಗೆ ನೀಡಿದರೂ ಸಂದೇಶಗಳನ್ನೂ ಲೆಕ್ಕಿಸದೇ ಅಪಾಯ ಮಟ್ಟದಲ್ಲಿ ಧುಮ್ಮಿಕ್ಕುತ್ತಿದ್ದ ಜಲಪಾತದಲ್ಲಿ ಮೋಜು ಮಸ್ತಿ ಮಾಡಲು ಇಳಿಯುತಿರುತ್ತಾರೆ.ಕಳೆದ ತಿಂಗಳು ಅರಣ್ಯ ಇಲಾಖೆಯು ಚಿಕ್ಕಮಗಳೂರು ಜಿಲ್ಲೆಯ ಜನಪ್ರಿಯ ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರನ್ನು ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಪ್ರವಾಸಿ ಚಟುವಟಿಕೆಗಳು ಹೆಚ್ಚಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆನ್‌ಲೈನ್ ಟಿಕೆಟಿಂಗ್ ಮೂಲಕ ಭೇಟಿಗಳನ್ನು ಮಿತಿಗೊಳಿಸುವ ಪ್ರಯತ್ನಗಳ ಹೊರತಾಗಿಯೂ, ಕೇವಲ ಮೂರು ದಿನಗಳಲ್ಲಿ ಸುಮಾರು 20,000 ವ್ಯಕ್ತಿಗಳು ಎತ್ತಿನ ಭುಜಕ್ಕೆ ಭೇಟಿ ನೀಡಿದ್ದಾರೆ.

ಚಿಕ್ಕಮಗಳೂರು ವಿಭಾಗದ ಪೊಲೀಸ್ ಗಸ್ತು ಸಿಬ್ಬಂದಿಗಳು ಬೀಟ್ ರೌಂಡ್ ಹೊಡೆಯುತ್ತಿರುವ ಸಂದರ್ಭದಲ್ಲಿ ಕೆಲವು ಯುವಕರು ಜಲಪಾತದಲ್ಲಿ ಸ್ನಾನ ಮಾಡುವುದಕ್ಕಾಗಿ ಜಲಪಾತಕ್ಕೆ ಇಳಿಯುತ್ತಿದ್ದರು, ಅಷ್ಟೇ ಅಲ್ಲದೇ ಕಲ್ಲು ಬಂಡೆಗಳನ್ನು ಹತ್ತುತ್ತಿದ್ದರು. ಇದನ್ನು ಗಮನಿಸಿದ , ಯುವಕರ ಬಟ್ಟೆಗಳನ್ನು ಕೊಂಡೊಯ್ದಿದ್ದಾರೆ. ಇದನ್ನು ಗಮನಿಸಿದ ಯುವಕರು, ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿಯೇ ವಾಗ್ವಾದಕ್ಕೆ ಇಳಿದಿದ್ದಾರೆ.

ಮಳೆಗಾಲದಲ್ಲಿ ಬಂಡೆ ಜಾರುವುದರಿಂದ ಆನೇಕ ಅವಘಡ ಸಂಭವಿಸಿದ್ದು ಈ ಬಗ್ಗೆ ಪೊಲೀಸರು ಪೋಲೀಸರು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ ಆದರೆ ಕುಡಿದ ಮತ್ತಿನಲ್ಲಿರುವವರಿಗೆ ಅಪಾಯದ ಸ್ಥಿತಿ ಗೊತ್ತಾಗದೆ ಇರುವುದರಿಂದ ಹೆಚ್ಚಿನ ಅವಘಡ ಈ ರೀತಿಯಿಂದ ನಡೆಯುತ್ತದೆ.ಮಳೆಗಾಲದ ಅಪಾಯದ ಕಾರಣ ಅಧಿಕಾರಿಗಳು ಈಗಾಗಲೇ ಚಾರ್ಮಾಡಿ ಘಾಟ್‌ನ ಅಲೆಕಾನ್ ಜಲಪಾತ ಸೇರಿದಂತೆ ಹಲವಾರು ಜಲಪಾತಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.ಕೊನೆಗೆ ಪೊಲೀಸರು ಅವರಿಗೆ ಸುರಕ್ಷತಾ ಸೂಚನೆಗಳನ್ನು ನೀಡಿದ ನಂತರ ಮತ್ತು ಅವರ ಬಟ್ಟೆಗಳನ್ನು ಹಿಂದಿರುಗಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular