ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ- ಆಕೆಯ ಗಂಡ ಸತ್ತು 6-7 ವರ್ಷಗಳು ಕಳೆದಿದ್ದು,ವಿಲಾಸಿ ಮೋಜು ಮಸ್ತಿಯ ಜೀವನಕ್ಕಾಗಿ ವಿವಾಹವಾಗುವುದಾಗಿ ನಂಬಿಸಿ ಹಲವು ಪುರುಷರ ಬಳಿ ಹಣ ಪಡೆದು ವಂಚನೆ ಮಾಡುತ್ತಿದ್ದ ಕಿಲಾಡಿ ಲೇಡಿಯನ್ನ ಚಿಕ್ಕಬಳ್ಳಾಪುರ ಸಿಇಎನ್ ( ಸೈಬರ್ ಠಾಣೆ ) ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಕೋಮಲಾ ಬಂಧಿತ ಮಹಿಳೆ. ಅಂದಹಾಗೆ ಕೋಮಲಾ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರಾಘವೇಂದ್ರ ಎಂಬುವವರನ್ನ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು ಆತನಿಂದ 7 ಲಕ್ಷ 40 ಸಾವಿರ ಪೀಕಿಸಿದ್ದಳು ಹೀಗಾಗಿ ರಾಘವೇಂದ್ರ ದೂರಿನ ಮೇರೆಗೆ ಕೋಮಲಾಳನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಈಕೆ ಇದೇ ರೀತಿ ಗುಜರಾತ್ ನಲ್ಲಿ ನೆಲೆಸಿರುವ ಕುಂದಾಪುರ ನಿವಾಸಿ ರಾಘವೇಂದ್ರ ಎಂಬುವವರಿಗೆ ಮೋಸ ಮಾಡಿರೋದು ಬೆಳಕಿಗೆ ಬಂದಿದೆ. ಜೊತೆಗೆ ಬೆಂಗಳೂರಿನ ನಾಗರಾಜು ಎಂಬುವವರ ಬಳಿ ಯೂ 1 ಲಕ್ಷ 50 ಸಾವಿರ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. ಮೂರು ಪ್ರಕರಣಗಳಲ್ಲೂ ಆಯಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇನ್ನೂ ಈಕೆ ಗಂಡ ಕೆಪಿಟಿಸಿಲ್ ನೌಕರನಾಗಿದ್ದು 2017 ರಲ್ಲಿ ಮರಣ ಹೊಂದಿದ್ದಾರೆ. ಗಂಡ ಮೃತಪಟ್ಟಿರುವ ಕಾರಣ ಆತನ ೦೬ ಕೋಟಿ ಪರಿಹಾರದ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತ ಹೇಳಿ ಹಣ ವಸೂಲಿ ಮಾಡುತ್ತಿದ್ದು ಸದ್ಯ ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್ ಠಾಣೆ) ಠಾಣೆ ಪೊಲೀಸರು ಈಕೆಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


