Saturday, November 23, 2024
Flats for sale
Homeರಾಜಕೀಯಚಿಕ್ಕಬಳ್ಳಾಪುರ : ಫ್ರೀ ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಕೆ : ರಾಜ್ಯ ಸರ್ಕಾರದ ವಿರುದ್ಧ...

ಚಿಕ್ಕಬಳ್ಳಾಪುರ : ಫ್ರೀ ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಕೆ : ರಾಜ್ಯ ಸರ್ಕಾರದ ವಿರುದ್ಧ ನಟ ಚೇತನ ಆಕ್ರೋಶ.

ಚಿಕ್ಕಬಳ್ಳಾಪುರ : ಫ್ರೀ ಗ್ಯಾರೆಂಟಿಗೆ ಯೋಜನೆಗೆ ದಲಿತರ ಹಣ ಬಳಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ನಟ ಚೇತನ ಆಕ್ರೋಶವ್ಯಕ್ತಪಡಿಸಿದ್ದಾರೆ.

ಪ್ರೀ ಗ್ಯಾರೆಂಟಿಗೆ ದಲಿತರ ಹಣ ಯಾಕೆ ಬಳಸಬೇಕು ? SC/ST ಹಣ ಗ್ಯಾರೆಂಟಿಗೆ ಬಳಕೆ ಖಂಡನಿಯ,ಮೂಡ ಹಗರಣ ಸರ್ಕಾರ ಬಾಗಿ ,ಇದು ಭ್ರಷ್ಟಾಚಾರದ ಹೆಗ್ಗಳಿಕೆ ಕುರಿ ಕಾಯುವವರಿಗೆ ಬಂದೂಕು ಲೈಸೆನ್ಸ್ ಕೊಡೋದು ಬಸವ ತತ್ವಕ್ಕೆ ವಿರೋಧ,ಕುರಿ ಮತ್ತು ಮೇಕೆ ಮೆವಿನ ನೆಪದಲ್ಲಿ ಕಾಡು ನಾಶಕ್ಕೆ ಸರ್ಕಾರ ಮುಂದಾಗಿದ್ದು ಸಮಾಜದ ಶೋಷಿತರ ಉದ್ದಾರದ ಹಣ ನಿಮ್ಮ ಅಧಿಕಾರಕ್ಕೆ ಬಳಿಕೆ ಮಾಡಿರುವುದು ಇಂದು 420 ಸರ್ಕಾರ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಳ್ಳರು ಕಾಂಗ್ರೆಸ್ ಡಬ್ಬಲ್ ಕಳ್ಳರು ಎಂದ ನೇರ ಆರೋಪ ಮಾಡಿದ ನಟ ಚೇತನ್, ದಲಿತರ ಹಣ ಲೂಟಿ ಹೊಡೆಯುತ್ತಿದ್ದರು ಸುಮ್ಮನೆ ಕೊತ್ತಿರುವ ದಲಿತ ಸಂಘಟನೆ ನಾಯಕರ ಮೇಲೆ ಹರಿಹಾಯ್ದರು.

ಸಂಘಟನೆ ನಾಯಕರು ಆಡಳಿತ ಪಕ್ಷಗಳ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು,ಸಮಾಜದ ಸ್ವಸ್ತ್ಯವನ್ನು ಹಾಳು ಮಾಡತ್ತಿರುವ ಕಾಂಗ್ರೆಸ್ ಸರ್ಕಾರ,ಭೂ ಮಾಫಿಯಾ,ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಜಾಸ್ತಿ ಆಗಿದೆ,PTCL ಕಾಯ್ದೆಯಲ್ಲಿ ಸರ್ಕಾರದಿಂದ ಬಂದ ಆದೇಶಗಳನ್ನು ಅಧಿನ ಸರ್ಕಾರಿ ನೌಕರರು ಪಾಲಿಸದೆ ಇರುವುದು ಖಂಡನೀಯ ಎಂದರು .

ಸರ್ಕಾರಿ ನೌಕರರ ಕಾರ್ಯ ವೈಖರಿಯ ಬಗ್ಗೆ ಯಾಕೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ,ದಲಿತ ಉದ್ದಾರಕರು ಎಂಬ ಡೋಂಗಿ ಮಾತು ಸರಕಾರದ್ದು ಬೇಡ ಮಾತು ಎತ್ತಿದರೆ ನಾವೇ ದಲಿತರ ಪರ ಎಂದು ಹೇಳುವ ಸಿದ್ದರಾಮಯ್ಯ ದಲಿತರಿಗೆ ಮೋಸ ಮಾಡುತ್ತಿದ್ದಾರೆ ಎಂದರು. ಪ್ರತಿ ಹಂತದಲ್ಲೂ ಭ್ರಷ್ಟಾಚಾರವು ಈ ಸರ್ಕಾರ ಮಾಡುತ್ತಿದೆ,ST ನಿಗಮದ 187 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ,ಸಮಾಜವನ್ನು ಅನಾಥ ಮಾಡಲಿಕ್ಕೆ ಹೊರಟಿದೆ ಎಂದು ರಾಜ್ಯ ಸರ್ಕಾರವನ್ನು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಕಿಡಿ ಕಾರಿದರು.

RELATED ARTICLES

LEAVE A REPLY

Please enter your comment!
Please enter your name here

Most Popular