Wednesday, November 5, 2025
Flats for sale
Homeಕ್ರೈಂಚಿಂತಾಮಣಿ : 38 ವರ್ಷದ ಮಹಿಳೆಯ ಕಾಮದಾಟಕ್ಕೆ 19 ವರ್ಷದ ಯುವಕ ಬಲಿ..!

ಚಿಂತಾಮಣಿ : 38 ವರ್ಷದ ಮಹಿಳೆಯ ಕಾಮದಾಟಕ್ಕೆ 19 ವರ್ಷದ ಯುವಕ ಬಲಿ..!

ಚಿಂತಾಮಣಿ : ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ಮಹಿಳೆಯ ಲೈಂಗಿಕ ಪ್ರಚೋದನೆ ತಾಳಲಾರದೆ ಯುವಕ ನೇಣಿಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದ್ದು ನಿಕಿಲ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ.

38 ವರ್ಷದ ಶಾರದ ಎಂಬುವರೊಂದಿಗೆ 19 ವರ್ಷದ ನಿಕಿಲ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂದ ಹೊಂದಿದ್ದು ಪೋಷಕರ ವಿರೋಧದ ನಡುವೆಯೂ ಶಾರದ ಯುವಕನನ್ನು ಬಿಡಲಿಲ್ಲವೆಂದು ತಿಳಿದಿದೆ. ಪೋಷಕರ ಕಣ್ತಪ್ಪಿಸಿ ಕಾರಿನ ಡಿಕ್ಕಿಯಲ್ಲಿ ಯುವಕನನ್ನು ಶಾರದ ಹೊರಗಡೆ ಕರೆದೊಯ್ಯುತಿದ್ದು ಕಳ್ಳತನ ಪ್ರಕರಣಗಳಲ್ಲಿ ಶಾರದ ಯುವಕನನ್ನ ತೊಡಗಿಸುತಿದ್ದರೆಂದು ತಿಳಿದುಬಂದಿದೆ.

ಶಾರದ ಹಲವು ವರ್ಷಗಳ ಹಿಂದೆ ಗಂಡನಿಗೆ ವಿಚ್ಚೇದನ ನೀಡಿದ್ದು ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದರು. ಚಿಂತಾಮಣಿಯ ಕಾಚಹಳ್ಳಿ ಕೆರೆಯಲ್ಲಿ ನೇಣು ಬಿಗಿದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಮೃತ ಯುವಕನ ಪೋಷಕರು ಶಾರದ ವಿರುದ್ದ ದೂರು ನೀಡಿದ್ದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular