ಚಾಮರಾಜನಗರ : ಮಾದಪ್ಪ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಉಘೇ ಉಘೇ ಅಂತ ಜನರು ಬೇರೆ ಊರಿಂದ ಬರುತ್ತಾ ಮಾದಪ್ಪನ ದರ್ಶನ ಮಾಡುತ್ತಾರೆ. ಅದೇ ರೀತಿ ಶಿವರಾತ್ರಿ ಸಮೀಪಿಸುತ್ತಿದ್ದಂತೆ ಮಾದಪ್ಪನ ಸನ್ನಿಧಾನಕ್ಕೆ ಹತ್ತಾರು ಬಯಕೆಯನ್ನ ಹರಕೆ ಹೊತ್ತ ಭಕ್ತರ ಪಾದಯಾತ್ರೆ ಮಾಡುತ್ತ ಬರುವ ಜನ ಹೆಚ್ಚಾಗುತ್ತಿದೆ ಇದೀಗ, ಮಂಡ್ಯದ ಅಂಚೆದೊಡ್ಡಿಯ ಗ್ರಾಮದ ಜನರು ರೈತರ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗಲಿ ಎಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಾದಪ್ಪನ ಸನ್ನಿಧಾನಕ್ಕೆ ಮಾದಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ಸಾಮಾನ್ಯವಾಗಿ ಹಳ್ಳಿಜನರಲ್ಲಿ ಎಲ್ಲರೂ ನಗರ ಪ್ರದೇಶಕ್ಕೆ ಬಂದು ತಮ್ಮ ತಮ್ಮ ಜೀವನವನ್ನು ಅಭಿವೃದ್ಧಿ ಗೊಳಿಸಲು ಯತ್ನಿಸಿತ್ತಿರುವುದು ನಿಜ.ಈ ಹಿನ್ನೆಲೆ ಹಿರಿಯರ ಸೂಚನೆಯಂತೆ ಅಂಚೆದೊಡ್ಡಿಯ ಗ್ರಾಮದ ಜನರು ರೈತ ಮಕ್ಕಳಿಗೆ ಹೆಣ್ಣು ಸಿಗಲಿ ಎಂದು ಪಾದಯಾತ್ರೆ ಕೈಗೊಂಡ ಘಟನೆ ವರದಿಯಾಗಿದೆ ,ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ ರೈತ ಬಸಪ್ಪ ಪಾದಯಾತ್ರಿಕರು ಸನ್ನಿಧಾನದಲ್ಲಿ ಮಾದಪ್ಪನಿಗೆ ವಿವಿಧ ಸೇವೆ ಸಲ್ಲಿಸಿದ್ದು ,ತಮ್ಮ ಹರಕೆ ಹಿಡೇರಿದ ಮೇಲೆ ಮುಡಿ ಸೇವೆ ,ಉರುಳುಸೇವೆ ಇನ್ನಿತರ ಸೇವೆಯಮೂಲಕ ಹರಕೆ ಸಂದಾಯಕ್ಕೆ ತೊಡಗುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗದೇ ಇರುವುದು ಬೇಸರದ ವಿಷಯ ಎಂದು ತಿಳಿಸಿದ್ದಾರೆ.
ರೈತರು ದೇಶದ ಬೆನ್ನೆಲುಬು ಅಂತಾರೆ ಅಷ್ಟೇ ಆದರೆ ರೈತರ ಕುಟುಂಬಕ್ಕೆ ಈಗ ಸವಾಲಾಗಿದೆ ,ರೈತರನ್ನು ಮದುವೆಯಾಗಲು ಯಾರು ಮುಂದೆ ಬರುತ್ತಿಲ್ಲ,ರೈತರ ಬದುಕು ರೂಪಿಸಲು ,ಕುಟುಂಬ ವಿಸ್ತರಿಸಲು ಹೆಣ್ಣು ಕೊಡುತ್ತಿಲ್ಲ ಎಂಬುದು ಈ ಪ್ರದೇಶದ ಜನರ ಮಾತು ,ಆದರೆ ನೈಜ ವಿಚಾರಏನೆಂದರೆ ವಿದ್ಯಾಬ್ಯಾಸ ಮಾಡಿದ ಎಲ್ಲ ಯುವತಿಯರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಕೈತುಂಬಾ ಸಂಬಳಪಡೆಯುದರಿಂದ ಹಾಗೂ ಪ್ರೀತಿಯಲ್ಲಿ ಬಿದ್ದು ಇಷ್ಟ ಪಟ್ಟವರ ಜೊತೆ ಮಾಡುವೆ ಮಾಡುವುದರಿಂದ ಹಳ್ಳಿ ಪ್ರದೇಶದ ರೈತರಿಗೆ ಹೆಣ್ಣು ಸಿಗುವುದು ಕಷ್ಟವಾಗಿದೆ ಎಂಬುವುದು ತಜ್ಞರ ಅನಿಸಿಕೆ.


