ಚಳ್ಳಕೆರೆ : ತಾಲೂಕಿನ ನೆರಳುಗುಂಟೆ ಗ್ರಾಮದಲ್ಲಿ 92 ವರ್ಷದ ಅಜ್ಜಿ 4 ವರ್ಷದಿಂದ ಪಿಂಚಣಿ ಸಿಗದೆ ಜೀವನ ಸಾಗಿಸಲು ಕೂಲಿ ಕೆಲಸ ಮಾಡುತ್ತಿದ್ದಾರೆ.
ಪಿಂಚಣಿಗಾಗಿ ಅಲೆದರು ಪಿಂಚಣಿ ಸೌಲಭ್ಯ ಈ ಅಜ್ಜಿಗೆ ದೊರೆತಿಲ್ಲ ಈ ವಯಸ್ಸಿನಲ್ಲೂ ವೃದ್ದೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಮಾಹಿತಿ ನೀಡದೆ ಪಿಂಚಣಿಗಾಗಿ ಅಜ್ಜಿಯನ್ನು ಕಚೇರಿಗೆ ಅಲೆದಾಡಿದರು ಅಜ್ಜಿಗೆ ಪಿಂಚಣಿ ಸಿಗದೇ ಇರುವುದರಿಂದ 92 ವರ್ಷ ವಯಸ್ಸಿನಲ್ಲೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಅಜ್ಜಿಗೆ ನಡೆಯುವುದೇ ಕಷ್ಟ ಈ ವಯಸ್ಸಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ ಸಂಬಂಧಪಟ್ಟ ಶಾಸಕರು ಅಧಿಕಾರಿಗಳು ಇತ್ತ ಗಮನ ಹರಿಸಿ ಅಜ್ಜಿಗೆ ಪಿಂಚಣಿ ಸೌಲಭ್ಯ ದೊರೆಯುವಂತೆ ಮಾಡಬೇಕು ನಾಲ್ಕು ವರ್ಷಗಳಿಂದ ಅಜ್ಜಿಗೆ ಪಿಂಚಣಿ ಸ್ಥಗಿತಗೊಂಡಿದೆ ಈ ನಾಲ್ಕು ವರ್ಷದ ಪಿಂಚಣಿ ಅಜ್ಜಿಗೆ ಸಿಗುವಂತೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳು ಅಜ್ಜಿಯ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


