ಗೋಕಾಕ : ನಗರದ ಪಟಗುಂದಿ ಹನುಮಾನ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ನೂರಾರು ಹನುಮ ಮಾಲಾಧಾರಿಗಳ ಸೇವಾ ಸಮಿತಿಯ ಆಶ್ರಯದಲ್ಲಿ ಬೃಹತ್ ಶೋಭಾ ಸಂಕೀರ್ತನಾ ಯಾತ್ರೆಯು ಭಕ್ತಿ ಭಾವದಿಂದ ನಡೆಯಿತು.
ಶೋಭಾ ಯಾತ್ರೆಗೂ ಪೂರ್ವದಲ್ಲಿ ಪಟಗುಂದಿ ಹನುಮಾನ ದೇವಸ್ಥಾನದಲ್ಲಿ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆಯನ್ನು ಮಾಲಾಧಾರಿಗಳು ನೆರವೇರಿಸಿದರು.ಮೆರವಣಿಗೆಯೊಂದಿಗೆ ನಡೆದ ಶೋಭಾಯಾತ್ರೆಯು ಗೋಕಾಕ ನಗರದ ಪ್ರಮುಖ ಬೀದಿಗಳ ಮುಖಾಂತರ ತೆರಳಿ ತಿರುಗಿ ಪಟಗುಂದಿ ಹನುಮಾನ ದೇವಸ್ಥಾನಕ್ಕೆ ತಲುಪಿತು. ರಸ್ತೆಯುದ್ದಕ್ಕೂ ಜೈ ಶ್ರೀರಾಮ ಘೋಷಣೆಗಳೊಂದಿಗೆ ಭಜನೆ ಮಾಡುತ್ತಾ ಮುಂದೆ ಸಾಗಿದರು.
ಶೋಭಾಯಾತ್ರೆಯ ಸಂದ್ರಭರ್ದಲ್ಲಿ ಭಕ್ತರು ಶ್ರೀರಾಮನ ಪಲ್ಲಕ್ಕಿ, ಹನುಮಾನ ಮತ್ತು ಶ್ರೀರಾಮನ ಮೂರ್ತಿಗಳ ಮೇಲೆ ಹೂ ಹಾರಿಸಿ ಭಕ್ತಿ ಮೇರೆದರು. ಇನ್ನು ಯಾವುದೆ ಘಟನೆ ನಡೆಯದಂತೆ ಗೋಕಾಕ ನಗರ ಮತ್ತು ಗ್ರಾಮೀಣ ಠಾಣೆಯ ಸಿಬ್ಬಂದಿಗಳು ನಿಗಾವಹಿಸಿದ್ದರು.


