Friday, March 13, 2026
Flats for sale
Homeರಾಜ್ಯಗೋಕಾಕ : ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ,ವಾಹನಗಳು ಜಕಂ.

ಗೋಕಾಕ : ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ,ವಾಹನಗಳು ಜಕಂ.

ಗೋಕಾಕ : ಒತ್ತುವರಿ ಮಾಡಿದ ಅರಣ್ಯ ಜಾಗವನ್ನು ತೆರವುಗೊಳಿಸಲು ಹೋದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ ನಡೆದಿರುವ ಘಟನೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಎಳುಪಟ್ಟಿಯಲ್ಲಿ ನಡೆದಿದೆ.

ಕಾಯ್ದಿರಿಸಿದ ಅರಣ್ಯ ಇಲಾಖೆಯ ಜಾಗೆಯನ್ನು ಏಳುಪಟ್ಟಿ ಗ್ರಾಮಸ್ಥರು ಒತ್ತುವರಿ ಮಾಡಿದ್ದರು.ಒತ್ತುವರಿ ಮಾಡಿದ್ದ ಅರಣ್ಯ ಇಲಾಖೆಯ ಜಾಗೆಯನ್ನು ತೆರವುಗೊಳಿಸಲು ಹೋದಾಗ ಗ್ರಾಮಸ್ಥರು ಅಧಿಕಾರಿಗಳ ಹಾಗೂ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇದರಿಂದಾಗಿ ಅರಣ್ಯ ಇಲಾಖೆಯ ವಾಹನ ಹಾಗೂ ಪೋಲಿಸ್ ಇಲಾಖೆಯ ವಾಹನ ಗಾಜು ಪುಡಿಪುಡಿಯಾಗಿದ್ದು ಒಂದಿಷ್ಟು ಗೊಂದಲ ಉಂಟಾಗಿ ಭಯದ ಆತಂಕ ಸೃಷ್ಟಿಯಾಗಿತ್ತು.

ಇನ್ನು ಪೋಲಿಸ್ ವಾಹನ ಹೋಗದಂತೆ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಕಲ್ಲು ಇಟ್ಟಿದ್ದು, ಪೊಲೀಸರ ವಾಹನ ಮತ್ತು ಅರಣ್ಯ ಇಲಾಖೆಯ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದರಿಂದ ಕಲ್ಲು ಬಿದ್ದು ವಾಹನಗಳು ಜಖಂಗೊಂಡಿವೆ.

ಇನ್ನು ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಸಿಬ್ಬಂದಿ ಓಡಿ ಹೋಗಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 22 ಜನರ ಮೇಲೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular