ಗುವಾಹತಿ : ಅಸ್ಸಾಮಿನ ಶ್ರೀ ಭೂಮಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ನಾಯಕರೊಬ್ಬರು ಬಾಂಗ್ಲಾ ರಾಷ್ಟ್ರಗೀತೆ ಬಾಂಗ್ಲಾ ಹಾಡುತ್ತಿರುವ ವಿಡಿಯೋ ವಿವಾದವನ್ನು ಹುಟ್ಟುಹಾಕಿದೆ. ಲೋಕ ಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೋಗೊಯ್ ಸೇರಿದಂತೆ ಹಲವರು ನಾಯ ಕರು ಇದರಲ್ಲಿ ಭಾಗಿಯಾಗಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.
ಭಾರತದ ಏಳು ರಾಜ್ಯಗಳನ್ನು ಒಳಗೊಂಡ ಬಾಂಗ್ಲಾದೇಶ ನಕಾಶೆ ವಿವಾದ ಇನ್ನೂ ಮುನ್ನಲೆಯಲ್ಲಿರುವಾಗಲೇ ಅಸ್ಸಾಮಿನ ಶ್ರೀ ಭೂಮಿಯಲ್ಲಿ ನಡೆದಿರುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ನಾಯಕರೊಬ್ಬರು ಬಾಂಗ್ಲಾ ರಾಷ್ಟ್ರಗೀತೆ ಅಮರ್ ಸೋನಾರ್ ಬಾಂಗ್ಲಾ ಹಾಡುತ್ತಿರುವ ವಿಡಿಯೋ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ವಿಚಿತ್ರವೆಂದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೋಗೊಯ್, ಪಕ್ಷದ ಹಿರಿಯ ಸದಸ್ಯ ಬಿಧು ಭೂಷಣ್ ದಾಸ್ ಅವರು ರವೀಂದ್ರನಾಥ್ ಟಾಗೋರರ ಸುಂದರ ಸಂಯೋಜನೆಯ ಅಮರ್ ಶೋನರ್ ಬಾಂಗ್ಲಾ ಬಂಗಾಳಿ ಹಾಡನ್ನು ಹಾಡಿದರೆಂದು ಹೆಮ್ಮೆಯಿಂದ ಹೇಳಿಕೊAಡಿದ್ದಾರೆ.
ದುರದೃಷ್ಟವಶಾತ್ ಬಿಜೆಪಿ ಇದನ್ನು ಟೀಕಿಸುತ್ತಿದೆ. ಇದು ಮುಸ್ಲಿಮರ ಹಾಡು ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ ಎಂದು ಹೇಳಿಕೊಳ್ಳುತ್ತಿದೆ. ಹಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಅರ್ಥ ಮಾಡಿಕೊಳ್ಳುವಲ್ಲಿ ಅದು ವಿಫಲವಾಗಿದೆ ಎಂದೂ ದೂಷಿಸಿದರು. ನಮ್ಮ ಸಾಹಿತ್ಯ, ಪರಂಪರೆ ಆಚರಿಸುವ ಬಂಗಾಳಿ ಹಾಡನ್ನು ನಾವು ಯಾಕೆ ಹಾಡಬಾರದು ಎಂದೂ ಕೇಳಿದರು.
ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದ್ದು ಕೆಲವು ದಿನಗಳ ಹಿಂದೆಯಷ್ಟೇ ಬಾಂಗ್ಲಾದೇಶವು ಸAಪೂರ್ಣ ಈಶಾನ್ಯ ರಾಜ್ಯಗಳೇ ತನ್ನದು ಎನ್ನುವ ನಕಾಶೆ ಪ್ರಕಟಿಸಿತ್ತು. ಈಗ ಬಾಂಗ್ಲಾದೇಶಕ್ಕೆ ಮನಸೋತಿರುವ ಕಾಂಗ್ರೆಸ್ ಅಸ್ಸಾಮಿನಲ್ಲಿ ಬಾಂಗ್ಲಾ ರಾಷ್ಟçಗೀತೆಯನ್ನು ಹೆಮ್ಮೆಯಿಂದ ಹಾಡಿದೆ. ಈ ಬೆಳವಣಿಗೆಯ ನಂತರವೂ ಯಾರಿಗಾದರೂ ಈ ಕಾರ್ಯಸೂಚಿ ಅರ್ಥವಾಗದಿದ್ದರೆ ಅವರು ನಿಜವಾಗಿಯೂ ಕುರುಡರು ಅಥವಾ ಅವರ ಜೊತೆ ಶಾಮೀಲಾಗಿದ್ದಾರೆ ಇಲ್ಲವೇ ಇಬ್ಬರೂ ಸೇರಿಕೊಂಡು ಮಾಡಿರುವ ಕೃತ್ಯವೆಂದೇ ಹೇಳಬೇಕಾಗುತ್ತದೆ ಎಂದಿದೆ.


