ಗದಗ : ಹಿಂದೂಗಳ ಐತಿಹಾಸಿಕ ಶ್ರೀ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣ ಮಾಡಲು ಒಂದು ಸಮುದಾಯ ಮುಂದಾದ ಘಟನೆ ವರದಿಯಾಗಿದೆ.
ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆದು ಹಿಂದೂಗಳ ಧಾರ್ಮಿಕ ವಿಚಾರಗಳಲ್ಲಿ ನಂಬಿಕೆ ಇಲ್ಲದನಂತಹ ಸಂದರ್ಭದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಕ್ರೋಶ ಗೊಂಡ ಹಿಂದೂ ಸಂಘಟನೆ ಹಿಂದೂಗಳ ಪೂಜೆ ಪುನಸ್ಕಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದ್ರು ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮಹಿಳೆಯರು ಪ್ರತಿಭಟಿಸಿ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ನಿರ್ಮಾಣ ಆರಂಭಿಸಿದ್ರೆ ಮುಂದೇ ಏನಾದ್ರೂ ಆದ್ರೆ ಜಿಲ್ಲಾಡಳಿತವೇ ಹೊಣೆ ಅಂತ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಸರಕಾರ ನಮ್ಮ ತೆರಿಗೆಯ ದುಡ್ಡಿನಿಂದ ಇನ್ನಿತರಿಗೆ ಬಿಟ್ಟಿ ಅನುದಾನಕೊಡುವುದನ್ನು ನಿಲ್ಲಿಸಬೇಕೆಂದು ಸ್ಥಳೀಯ ಸಂಘಟನೆಯ ಮುಖಂಡ ಸರಕಾರಕ್ಕೆ ಒತ್ತಾಯಿಸಿದ್ದಾರೆ.ಏಕೆಂದರೆ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಪ್ಲಾನ್ ಹಾಕಲಾಗಿದೆ. ಇದರಿಂದ ಹಿಂದೂ ಸಮುದಾಯದ ಪೂಜೆ ಪುರಸ್ಕಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಕೋಮಸೌಹಾರ್ದ ಧಕ್ಕೆ ಆಗುವ ಆತಂಕದಲ್ಲಿ ಹಿಂದೂ ಸಮುದಾಯವಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪರವಾನಿಗೆ ನೀಡದಂತೆ ಒತ್ತಾಯ ಮಾಡಲಾಗಿದೆ. ಹೀಗಾಗಿ ಶಾದಿಮಹಲ್ ಬೇಡ ಅಂತ ಡಿಸಿ ಕಚೇರಿ ಎದುರು ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶವ್ಯಕ್ತಪಡಿಸಿದ್ದಾರೆ.


