ಗಂಗಾವತಿ : ಜನ ವಸತಿ ಪ್ರದೇಶದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಮೀಪ ಮೊಸಳೆಯೊಂದು ಕಂಡು ಬಂದಿದ್ದು, ಕೆಲಕಾಲ ವಸತಿ ಪ್ರದೇಶದ ಜನರಲ್ಲಿ ಕೆಲಕಾಲ ಆತಂಕ ನಿರ್ಮಾಣವಾದ ಘಟನೆ ಜಯನಗರದಲ್ಲಿ ನಡೆದಿದೆ.
ಜಯನಗರದ ಮೂರನೇ ಹಂತದ ಸಾಲಿಮಠ ಎಂಬುವವರ ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಮನೆ ಸಮೀಪದ ಮರಳಿನ ದಿಬ್ಬದ ಸಮೀಪ ಮೊಸಳೆ ಕಂಡು ಬಂದಿದೆ.ಕೂಡಲೆ ಸ್ಥಳಕ್ಕೆ ಆಗಮಿಸಿ ವನ್ಯಜೀವಿ ಪ್ರೇಮಿ ಹಾಗೂ ಉರಗ ತಜ್ಞ ಸಿರಿಗೇರಿ ರಾಘವೇಂದ್ರ, ಮೊಸಳೆಯನ್ನು ಹಿಡಿದು ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ತುಂಗಭದ್ರಾ ನದಿಯ ಸುರಕ್ಷಿತ ತಾಣಕ್ಕೆ ಬಿಟ್ಟು ಬಂದಿದ್ದಾರೆ.
ಸುಮಾರು ನಾಲ್ಕು ಅಡಿ ಉದ್ದ ಇರುವ ಮೊಸಳೆ, ಎಂಟು ಕೆಜಿ ಭಾರವಿದ್ದು ಸಂಪೂರ್ಣ ಆರೋಗ್ಯವಾಗಿತ್ತು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ. ಜನ ವಸತಿ ಪ್ರದೇಶದ ಸುತ್ತಲೂ ಯಾವುದೇ ನೀರಿನ ಮೂಲಗಳಿಲ್ಲ.ಆದಾಗ್ಯೂ ಮೊಸಳೆ ಕಾಣಿಕೊಂಡಿರುವುದು ಜನರಲ್ಲಿ ಯಕ್ಷ ಪ್ರಶ್ನೆಗೆ ಕಾರಣವಾಗಿದೆ.


