Friday, March 13, 2026
Flats for sale
Homeರಾಜ್ಯಗಂಗಾವತಿ : ಮಂದಿರ ಲೊಕಾರ್ಪಣೆ: ಕಾತರದಿಂದ ಕಾಯುತ್ತಿರುವ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಕೆಲಸ: `ಆ...

ಗಂಗಾವತಿ : ಮಂದಿರ ಲೊಕಾರ್ಪಣೆ: ಕಾತರದಿಂದ ಕಾಯುತ್ತಿರುವ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಕೆಲಸ: `ಆ ದಿನಗಳು’ ಹೇಗಿತ್ತು..?

ಗಂಗಾವತಿ: `ಅಯೊಧ್ಯೆಯ ಪ್ರಭು ಶ್ರೀರಾಮಚಂದ್ರನ ಮಂದಿರ’, ಎಂಬ ಈ ಶಬ್ದ ಕೇಳಿದರೆ ಸಾಕು ಭಾರತೀಯರು ಅದರಲ್ಲೂ ಹಿಂದುಗಳ ಧಾಮರ್ಿಕ ಅಸ್ಮಿತೆ ಜಾಗೃತವಾಗುತ್ತದೆ. ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವದ ಗಮನ ಸೆಳೆದಿದೆ.

ಜನವರಿ 22ರಂದು ಲೋಕಾರ್ಪಣೆಯಾಗಲಿರುವ ಅಯೋಧ್ಯೆಯ ರಾಮಮಂದಿರಕ್ಕಾಗಿ ಹಿಂದುಗಳ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮಂದಿರ ನಿಮರ್ಾಣ ಕಾರ್ಯದಲ್ಲಿ ಖುದ್ದು ಭಾಗಿಯಾಗಿರುವ ಕಲಾವಿದರು, ಕುಶಲ ಕಮರ್ಿಗಳಲ್ಲಿ ಮಂದಿರ ಲೋಕಾರ್ಪಣೆ ಇನ್ನೆಂಥ ಕುತೂಹಲ ಮೂಡಿಸಿರಲಿಕ್ಕಿಲ್ಲ..?

ಮಂದಿರ ನಿಮರ್ಾಣ ಕಾರ್ಯದಲ್ಲಿ 45 ದಿನಗಳ ಕಾಲ ಭಾಗಿಯಾಗಿ ಬಂದಿರುವ ಗಂಗಾವತಿ ಶಿಲ್ಪ ಕಲಾವಿದ ಪ್ರಶಾಂತ ಸೋನಾರ್, ಮಂದಿರ ಲೋಕಾರ್ಪಣೆ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಕೆಲಸ ಮಾಡುತ್ತಿದ್ದ `ಆ ದಿನಗಳು’ ಹೇಗಿತ್ತು ಎಂಬುವುದರ ಬಗ್ಗೆ ಮೆಲಕು ಹಾಕಿದ್ದಾರೆ.

ಅಕ್ಟೋಬರ್-ನವಂಬರ್ ಎರಡು ತಿಂಗಳಲ್ಲಿ ಒಟ್ಟು 45 ದಿನಗಳ ಕಾಲ ಅಯೋಧ್ಯೆಯಲ್ಲಿ ಕೆಲಸ ಮಾಡಿದ ಪ್ರಶಾಂತ ಸೋನಾರ್, ದೀಪಾವಳಿಗೆಂದು ಮನೆಗೆ ಬಂದಿದ್ದಾರೆ. ಮಂದಿರ ಲೋಕಾರ್ಪಣೆಯ ಬಳಿಕ ಬಾಕಿ ಉಳಿದ ಕೆಲಸಕ್ಕೆ ಮತ್ತೆ ಕರೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಫುಲ್ ಟೈಟ್ ಸೆಕ್ಯೂರಿಟಿ:
ಅಯೋಧ್ಯೆಯ ರಾಮಮಂದಿರದಲ್ಲಿನ ಹೊರಾಂಗಣದ ಸ್ತಂಭ, ಶಿಲಾ ಕೃತಿಗಳ ಕೆತ್ತನೆ ಕಾರ್ಯದಲ್ಲಿ ಸುಮಾರು 45 ದಿನಗಳನ್ನು ಕಳೆದಿರುವ ಗಂಗಾವತಿಯ ಶಿಲ್ಪ ಕಲಾವಿದ ಪ್ರಶಾಂತ್ ಸೋನಾರ್ ಅದೊಂದು ಅಧ್ಬುತ ಅನುಭವ ಎಂದು ಹೇಳಿಕೊಳ್ಳುತ್ತಾರೆ.

ಮುಖ್ಯವಾಗಿ ನಾವು ಮಾಡುವ ಕೆಲಸದ ತಾಣಕ್ಕೆ ಮೊಬೈಲ್ಗಳನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ. ಅನಾಗತ್ಯ ಯಾರೊಂದಿಗೆ ಮಾತನಾಡುವಂತಿರಲಿಲ್ಲ ,ಎಲ್ಲಾ ಕಡೆಯಿಂದ ಕಟ್ಟು ನಿಟ್ಟಿನ ತನಿಖಾ ಕೇಂದ್ರಗಳಿದ್ದವು. ಬೆಳಗ್ಗೆ ಎಂಟು ಗಂಟೆಗೆ ಶುರುವಾಗುತ್ತಿದ್ದ ಕೆಲಸ, ಸಂಜೆ ಆರು ಗಂಟೆಗೆ ಮುಗಿಯುತಿತ್ತು. ಅತ್ಯಂತ ಟೈಟ್ ಸೆಕ್ಯೂರಿಟಿಯಲ್ಲಿ ನಾವು ಕೆಲಸ ಮಾಡಬೇಕಿತ್ತು. ಮುಖ್ಯವಾಗಿ ನಮಗೆ ಕೊಟ್ಟ ಕೆಲಸವಷ್ಟೆ ಮಾಡಬೇಕಿತ್ತು. ನಮ್ಮ ತಂಡದ ಸದಸ್ಯರನ್ನು ಹೊರತು ಪಡಿಸಿದರೆ ಬೇರೆ ಗುಂಪಿನೊಂದಿಗೆ ಪರಸ್ಪರ ಮಾತುಕತೆಗೆ ಆಸ್ಪದ ಇರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular