Sunday, March 15, 2026
Flats for sale
Homeರಾಜ್ಯಗಂಗಾವತಿ : ಪ್ರವಾಸೋದ್ಯಮದ ಸಾಧ್ಯತೆ: ಖುದ್ದು ವೀಕ್ಷಣೆಗೆ ಇಳಿದ ಶಾಸಕ ರೆಡ್ಡಿ.

ಗಂಗಾವತಿ : ಪ್ರವಾಸೋದ್ಯಮದ ಸಾಧ್ಯತೆ: ಖುದ್ದು ವೀಕ್ಷಣೆಗೆ ಇಳಿದ ಶಾಸಕ ರೆಡ್ಡಿ.

ಗಂಗಾವತಿ : ಐತಿಹಾಸಿಕ ಹಾಗೂ ಪ್ರಮುಖ ಧಾಮರ್ಿಕ ತಾಣವಾಗಿರುವ ಆನೆಗೊಂದಿ ಸುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಹೇಗೆ ಪರಿವತರ್ಿಸಬಹುದು ಅದಕ್ಕಿರುವ ಸಾಧ್ಯತೆಗಳೇನು ಎಂದು ಅರಿಯುವ ಉದ್ದೇಶಕ್ಕೆ ಗಂಗಾವತಿಯ ಶಾಸಕ ಗಾಳಿ . ಜನಾರ್ದರೆಡ್ಡಿ ಸ್ವತಃ ತಾವೆ ಆ ಭಾಗದಲ್ಲಿ ಸಂಚರಿಸಿ ಪಟ್ಟಿಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿರುವ ಹಚ್ಚ ಹಸಿರಿನ ನಿಸರ್ಗ ರಮಣೀಯ ತಾಣಗಳು, ಕಣ್ಣು ಹಾಯಿಸಿದುದ್ದಕ್ಕೂ ಕಾಣ ಸಿಗುವ ಬೃಹತ್ ಶಿಲಾ ಪರ್ವತಗಳ ಸಾಲು, ಇದರ ಮಧ್ಯೆ ತುಂಗಭದ್ರಾ ನದಿಯ ನೀನಾದಂತ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ರೆಡ್ಡಿ, ಈ ತಾಣಗಳನ್ನು ಹೇಗೆ ಪ್ರವಾಸೋದ್ಯಮಕ್ಕೆ ಸಂಪಕರ್ಿಸಬೇಕೆಂಬ ಯೋಜನೆ ರೂಪಿಸುತ್ತಿದ್ದಾರೆ. ಅಲ್ಲದೇ ಸಣಾಪುರದಲ್ಲಿರುವ ಜಲಾಶಯದಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ನಾಡದೋಣಿಯಲ್ಲಿ ಸಂಚರಿಸಿದ ಶಾಸಕ, ಈ ಕೆರೆಯನ್ನು ಬೋಟಿಂಗ್ ಸ್ಪಾಟ್ ಆಗಿ ಪರಿವತರ್ಿಸಿದರೆ ಹೇಗೆ ಎಂಬ ವಿಚಾರವನ್ನು ತಮ್ಮ ಬೆಂಬಲಿಗರಲ್ಲಿ ಚರ್ಚಿಸಿದರು.

ಆನೆಗೊಂದಿ ಭಾಗದಲ್ಲಿರುವ ಋಷಿಮುಖ ಪರ್ವತ, ಅಂಜನಾದ್ರಿ, ಪಂಪಾಸರೋವರ, ಮಾಧ್ವಯತಿಗಳ ವೃಂದಾವನ ಸ್ಥಳ ನವವೃಂದಾವನ, ವಾಲಿಕಿಲ್ಲಾ, ದುಗರ್ಾ ಬೆಟ್ಟ ಸೇರಿದಂತೆ ನಾನಾ ಪ್ರಮುಖ ಧಾಮರ್ಿಕ ಪ್ರದೇಶಗಳನ್ನು ಹೊರ ಜಿಲ್ಲೆ, ರಾಜ್ಯದಲ್ಲಿ ವ್ಯಾಪಕ ಪ್ರಚಾರ ಮಾಡುವ ಬಗ್ಗೆ ಚಚಿಸಿದರು ಎಂದು ಗೊತ್ತಾಗಿದೆ.

ಈ ಹಿಂದೆ ರಾಜ್ಯದಲ್ಲಿ ಪ್ರವಾಸೋದ್ಯಮ ಖಾತೆಯ ಸಚಿವ ಸ್ಥಾನವಹಿಸಿಕೊಂಡು ಉತ್ತಮವಾಗಿ ಕೆಲಸ ಮಾಡಿದ ಅನುಭವ ಇರುವ ಹಾಲಿ ಶಾಸಕ ಜಿ. ಜನಾರ್ದರೆಡ್ಡಿ ಅವರಿಗೆ ಪ್ರವಾಸೋದ್ಯಮದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಗಂಗಾವತಿ ಸುತ್ತಲಿನ ಪ್ರದೇಶದಲ್ಲಿನ ಕೇಂದ್ರಗಳನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ರೆಡ್ಡಿ ಗಮನಹರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular