ಗಂಗಾವತಿ : ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೂ ಸುರಿದ ಅಕಾಲಿಕ ಮಳೆ ಹಾಗೂ ಬೀಸಿದ ಭಾರಿ ಗಾಳಿಗೆ ಗಂಗಾವತಿ ಮತ್ತು ಕಾರಟಗಿ ತಾಲ್ಲೂಕಿನಲ್ಲಿ 3500ಕ್ಕೂ ಅಧಿಕ ಹೆಕ್ಟೇರು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಯಾಗಿದೆ.
ಕೊಯ್ಲಿನ ಹಂತಕ್ಕೆ ಬಂದಿದ್ದ ಸೋನಾಮಸೂರಿ ತಳಿಯ ಭತ್ತದ ಬೆಳೆ ಹೆಚ್ಚಿನ ಹಾನಿಯಾಗಿದೆ. ಕಾರಟಗಿ ತಾಲ್ಲೂಕು ಒಂದರಲ್ಲಿಯೇ ಅತಿಹೆಚ್ಚು ಹಾನಿಯಾಗಿದ್ದು, ಸುಮಾರು ಮೂರು ಸಾವಿರ ಹೆಕ್ಟೇರು ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ಸುಮಾರು ಐದು ನೂರು ಹೆಕ್ಟೇರು ಪ್ರದೇಶದಲ್ಲಿನ ಭತ್ತ ಹಾನಿಯಾಗಿದೆ.
ಕಾರಟಗಿ-ಸಿದ್ದಾಪುರ ಹೋಬಳಿಯ ಬೂದಗುಂಪಾ, ಯರೋಡಣಾ, ಈಳಿಗೆನೂರು, ಮಲರ್ಾನಹಳ್ಳಿ, ಗಂಗಾವತಿ-ಮರಳಿ ಹೋಬಳಿಯ ಹೊಸಳ್ಳಿ, ಹಣವಾಳ, ಹೊಸಕೇರಿ, ಶ್ರೀರಾಮನಗರ, ಮರಳಿ, ನರಸಾಪುರ ಮೊದಲಾದ ಗ್ರಾಮಗಳಲ್ಲಿನ ಭತ್ತ ಹಾನಿಯಾಗಿದೆ ಎಂದು ಗೊತ್ತಾಗಿದೆ. ಭತ್ತದ ಹಾನಿ ಮಾಹಿತಿ ಲಭಿಸುತ್ತಿದ್ದಂತೆಯೆ ಅಧಿಕಾರಿಗಳು ಸಮೀಕ್ಷೆಗೆ ಇಳಿದಿದ್ದಾರೆ.
ಸಂಕಷ್ಟಗಳ ಸರಮಾಲೆ:
ಈ ಬಾರಿ ಎರಡು ಬೆಳೆಯ ನಿರೀಕ್ಷೆಯಲ್ಲಿದ್ದ ನೀರಾವರಿ ಪ್ರದೇಶದಲ್ಲಿನ ರೈತರಿಗೆ ಸಂಕಷ್ಟಗಳ ಸರಮಾಲೆ ಒಂದರ ಹಿಂದೊಂದರಂತೆ ಕಾಡುತ್ತಿವೆ. ಬರಗಾಲ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಗಳ ಮಧ್ಯೆ ಉತ್ತಮ ಬೆಳೆ ಬೆಳೆದಿದ್ದರು.
ಆದರೆ ಈಗ ಎರಡನೇ ಬೆಳೆಯ ಆಸೆಯೂ ರೈತರಲ್ಲಿ ಕಮರುತ್ತಿದ್ದು, ಬೆಳೆದಿದ್ದ ಒಂದು ಬೆಳೆಯೂ ಮಳೆಗಾಳಿಗೆ ಹಾನಿಯಾಗಿರುವುದು ರೈತರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಸಕರ್ಾರ ಕೂಡಲೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇಲಾಖೆಗಳ ಜಂಟಿ ಸಮೀಕ್ಷೆ:
ತುಂಗಭದ್ರಾ ಎಡದಂತೆ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಾದ ಗಂಗಾವತಿ, ಕಾರಟಗಿ ಭಾಗದಲ್ಲಿ ಬೆಳೆದಿದ್ದ ಭತ್ತದ ಬೆಳೆ ಮಳೆ-ಗಾಆಳಿಗೆ ಹಾನಿಯಾಗಿರುವ ಮಾಹಿತಿ ಲಭಿಸುತ್ತಿದ್ದಂತೆಯೆ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆಗೆ ಮುಂದಾಗಿದ್ದಾರೆ.
ಕೃಷಿ ಇಲಾಖೆಯ ಸಹಾಯಕ ನಿದರ್ೇಶಕ ಸಂತೋಷ್ ಪಟ್ಟದಕಲ್, ಗಂಗಾವತಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ಕಾರಟಗಿ ತಹಸೀಲ್ದಾರ್ ಕುಮಾರಸ್ವಾಮಿ ನೇತೃತ್ವದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡರು.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಸುರಿದ ಮಳೆಗೆ ಗಂಗಾವತಿ-ಕಾರಟಗಿ ತಾಲ್ಲೂಕಿನಲ್ಲಿ ಒಟ್ಟು ಮೂವರೆಸಾವಿರ ಹೆಕ್ಟೇರು ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಈ ಬಗ್ಗೆ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಬೆಳೆ ಹಾನಿಯ ಮೊತ್ತ 70 ಕೋಟಿ ರೂಪಾಯಿ ಆಗಿದೆ.
ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿದರ್ೇಶಕ ಸಂತೋಷ್ ಪಟ್ಟದಕಲ್ ಹೇಳಿದರು.


