Thursday, March 12, 2026
Flats for sale
Homeಕ್ರೀಡೆಕೋಲ್ಕತಾ : ಕನ್ನಡಿಗನನ್ನು ಕೆಣಕಿದ ಕೋಲ್ಕತಾ ವೇಗಿ ಹರ್ಷಿತ್ ರಾಣಾಗೆ ದಂಡ.

ಕೋಲ್ಕತಾ : ಕನ್ನಡಿಗನನ್ನು ಕೆಣಕಿದ ಕೋಲ್ಕತಾ ವೇಗಿ ಹರ್ಷಿತ್ ರಾಣಾಗೆ ದಂಡ.

ಕೋಲ್ಕತಾ : ಐಪಿಎಲ್ 2024ರ ಟೂರ್ನಿ ಪ್ರಾರಂಭವಾಗಿದ್ದು, ಈಗಾಗಲೇ ಪಂದ್ಯಗಳು ರೋಚಕ ಹಣಾಹಣಿ ಕಾಣುತ್ತಿರುವಂತೆಯೇ ಕೋಲ್ಕತಾ ವೇಗಿ ಹರ್ಷಿತ್ ರಾಣಾಗೆ ಬಿಸಿಸಿಐ ದಂಡ ಹೇರಿದೆ.

ನಿನ್ನೆ ಕೋಲ್ಕತ್ತಾ ಮತ್ತು ಸನ್​ರೈಸರ್ಸ್​ ತಂಡದ ನಡುವೆ ಭಾರೀ ಜಟಾಪಟಿ ನಡೆದಿತ್ತು. ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಕೋಲ್ಕತ್ತಾ ತಂಡ 208 ರನ್​ ಬಾರಿಸಿ ಹೈದರಾಬಾದ್​​ಗೆ ಸವಾಲೆಸೆದರು. ಆದರೆ ಇವರ ಸವಾಲನ್ನು ಸ್ವೀಕರಿಸಿದ ಸನ್​ರೈಸರ್ಸ್​ ತಂಡ ಶತ ಪಯತ್ನ ಮಾಡಿದರು. ಆದರೆ ಪಂದ್ಯ ಕೊನೆಯ ಓವರ್​ನಲ್ಲಿ ಎಡವಿದರು. ಆದರು ಕೋಲ್ಕತ್ತಾಗೆ ಕಠಿಣ ಪೈಪೋಟಿ ನೀಡುವ ಮೂಲಕ 4 ರನ್​ಗೆ (204) ಸೋತರು.

ಐಪಿಎಲ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮಧ್ಯಮ ವೇಗದ ಬೌಲರ್‌ ಹರ್ಷಿತ್‌ ರಾಣಾ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ವಿರುದ್ಧ ಶನಿವಾರ ನಡೆದ ಪಂದ್ಯ ಶುಲ್ಕದ ಶೇ 60ರಷ್ಟು ದಂಡ ಹೇರಲಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಪಿಎಲ್ ಆಡಳಿತ ಮಂಡಳಿ, ‘ರಾಣಾ ಅವರು, ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್‌ 2.5 ಅಡಿಯಲ್ಲಿ ಎರಡು ಬಾರಿ ಲೆವಲ್‌ 1 ಅಪರಾಧ ಮಾಡಿದ್ದಾರೆ. ಎರಡು ಬಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ ಶೇ 10 ಹಾಗೂ ಶೆ 50 ರಷ್ಟು ದಂಡ ವಿಧಿಸಲಾಗಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಆರ್ಟಿಕಲ್‌ 2.5, ವಿಕೆಟ್ ಪಡೆದ ವೇಳೆ ಸಂಭ್ರಮಿಸುವಾಗ ಬ್ಯಾಟರ್‌ ಅನ್ನು ಕೆರಳಿಸುವಂತೆ ಅತಿಯಾಗಿ ವರ್ತಿಸುವುದು, ಪ್ರಚೋದನಕಾರಿ ಭಾಷೆ ಅಥವಾ ಸನ್ನೆ ಬಳಸುವುದಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಮಯಂಕ್‌ ಅಗರವಾಲ್‌ ವಿಕೆಟ್‌ ಪಡೆದಾಗ ಸಂಭ್ರಮಿಸಿದ್ದಕ್ಕಾಗಿ ರಾಣಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ.

ಅಚ್ಚರಿ ಸಂಗತಿ ಎಂದರೆ ಕನ್ನಡಿಗ ಮಯಾಂಕ್​ ಅಗರ್ಮಾಲ್​ಗೆ 33 ವರ್ಷ, ಇತ್ತ ರಾಣಾಗೆ 22 ವರ್ಷ. ಆದ್ರೆ ಇಷ್ಟೊಂದು ಅಗ್ರೆಸಿವ್​ ಆಗಿ ವರ್ತಿಸಿದ್ದನ್ನು ಕಂಡು ಪಂದ್ಯದ ಶೇ60ರಷ್ಟು ದಂಡವನ್ನು ರಾಣಾಗೆ ವಿಧಿಸಲಾಗಿದೆ. ಇದನ್ನು ಗಮನಿಸಿದ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ರಾಣಾಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅದರಲ್ಲಿ ಕೆಲವರು ನಿನಗಿದು ಬೇಕಿತ್ತಾ ಮಗನೇ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular