ಕೊಡಗು : ತಮಿಳುನಾಡು ಕರ್ನಾಟಕ ರಸ್ತೆಯಲ್ಲಿ ಕಬ್ಬು ಒತ್ತೊಯುತ್ತಿದ್ದ ಲಾರಿಗಳನ್ನು ತಡೆದು ನಿಲ್ಲಿಸಿ ಕಬ್ಬನ್ನು ತಿನ್ನುವುದು ಸಾಮಾನ್ಯವಾಗಿದೆ.ಆದ್ರೆ ಮೈಸೂರು-ಕೊಡಗು ಗಡಿ ಆನೆ ಚೌಕೂರು ರಸ್ತೆಯಲ್ಲಿ ಕಳೆದ ರಾತ್ರಿ ಲಾರಿಯೊಂದನ್ನು ಕಾಡಾನೆಯೊಂದು ತಡೆದು ನಿಲ್ಲಿಸಿ ಟಾರ್ಪಲ್ ತೆಗೆದು ತರಕಾರಿಗಳನ್ನು ರಸ್ತೆಗೆ ಸುರಿದು ತಿಂದು ತೇಗಿದ ಗಜರಾಜನ ವಿಡಿಯೋ ವೈರಲ್ ಆಗಿದೆ.
ರಾತ್ರಿ 10.45ರ ಸುಮಾರಿಗೆ ಆನೆ ಚೌಕೂರು ಬಳಿ ಲಾರಿಗೆ ಅಡ್ಡಲಾಗಿ ಬಂದ ಒಂಟಿ ಸಲಗ ವಾಹನದ ಹಿಂಭಾಗಕ್ಕೆ ತೆರಳಿ ಟಾರ್ಪಲ್ ಎಳೆದು ವಿವಿಧ ತರಕಾರಿಗಳನ್ನ ಎಳೆದು ರಸ್ತೆಗೆ ಹಾಕಿದೆ. ಮೈಸೂರಿನಿಂದ ತರಕಾರಿ ತುಂಬಿದ ಲಾರಿಯೊಂದು ಆನೆಚೌಕೂರು, ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿತ್ತು.ಆ ವೇಳೆ ತಡೆದು ನಿಲ್ಲಿಸಿದ ಆನೆ ಸುಮಾರು ಅರ್ಧಗಂಟೆಗಳ ಕಾಲ ನಡುರಸ್ತೆಯಲ್ಲೇ ತಿಂದು ತೇಗಿ ತೆರಳಿದೆ.
ಸಧ್ಯ ಲಾರಿ ಚಾಲಕ ತರಕಾರಿ ಕಳೆದುಕೊಂಡು ಪರಿತಪಿಸಿದ್ದು ಅರಣ್ಯಾಧಿಕಾರಿಗಳ ವಸತಿ ಗೃಹ ಅಲ್ಲೇ ಸಮೀಪದಲ್ಲೇ ಇದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲದ ಕರಣ ಉಳಿದ ತರಕಾರಿ ತೆಗೆದುಕೊಂಡು ಕೇರಳ ತೆರಳಿದ್ದಾನೆ.ಆನೆ ತಿಂದ ತರಕಾರಿಗಳಿಂದ ನಷ್ಟ ಅನುಭವಿಸಿದ ಚಾಲಕ ಪರಿಹಾರಕ್ಕಾಗಿ ಅರಣ್ಯಇಲಾಖೆಯ ಅಧಿಕಾರಿಗಳ ಮೊರೆಹೋಗಿದ್ದಾನೆ.


