ಕುರುಗೋಡು : ರಾಜ್ಯದಲ್ಲಿ ಸರಕಾರ ಉಚಿತ ವಿದ್ಯುತ್ ಕೊಟ್ಟ ನಂತರ, ಈ ರಾಜ್ಯ ವ್ಯಾಪ್ತಿಯಲ್ಲಿ ಬೇಡಿಕೆ ಹೆಚ್ಚಾಗಿದ್ದು ಡಿಮ್ಯಾಂಡ್ ಪ್ರಕಾರ ಉತ್ಪಾದನೆ ಯಾಗಿಲ್ಲ ಉದಾರಣೆ ಬಳ್ಳಾರಿಯ ಕೆಪಿಟಿಸಿಲ್ ಥರ್ಮಲ್ ಪ್ಲಾಂಟ್ ನ ಮೂರು ಘಟಕಗಳು ಕಾರ್ಯ ನಿರ್ವಹಿಸಬೇಕು ಆದರೆ ಕೇವಲ ಒಂದು ಕೆಲಸ ಮಾಡುತ್ತಿದೆ, ರಾಯಚೂರು ಘಟಕದಲ್ಲಿ ನಲ್ಲಿ 4-5 ಥರ್ಮಲ್ ಪ್ಲಾಂಟ್ ಕಾರ್ಯನಿರ್ವಹಿಸಬೇಕಿತ್ತು ಆದರೆ 2 ಮಾತ್ರ ಕಾರ್ಯನಿರ್ವಹಿಸುತ್ತಿದೆ ಹಾಗೂ ಬಾಗಲಕೋಟೆಯಲ್ಲಿ ಕೂಡ ಸಾಕಷ್ಟು ವಿದ್ಯುತ್ ಸಮಸ್ಯೆ ಇದ್ದು ವಿದ್ಯುತ್ ಖರೀದಿ ಮಾಡಲು ಸರಕಾರದ ಬಳಿ ಹಣವಿಲ್ಲ ಎಂದು ತಿಳಿದುಬಂದಿದೆ.
ರೈತರಿಗೆ 7 ತಾಸು ವಿದ್ಯುತ್ ಕೊಡುತ್ತವೆ ಎಂದು ಹೇಳಿದ್ದು ಅದರೆ 2 ರಿಂದ ಮದ್ಯ 3 ತಾಸು ಮಾತ್ರ ಕೊಡುತ್ತಿದ್ದಾರೆ ಇದರಿಂದ ರೈತರ ಪಂಪು ಸೆಂಟ್ ಪರಿಕರಗಳು ಹಾಳಗಿದ್ದು, ರೈತರಲ್ಲಿ ಸಂಕಷ್ಷಕ್ಕೆ ದೂಡಿದೆ. ಇದ್ದರಿಂದ ರೈತರ ತೊಂದರೆಯಾಗಿದೆ. ಈ ಕಾರಣಕ್ಕೆ ಇದ್ದಿಲು ಖರೀದಿ ಮಾಡ ಬೇಕು. ಬಿ. ಶ್ರೀರಾಮುಲು ಎಂದರು.
ಅವರು ಸಮೀಪದ ಎಮ್ಮಿಗನೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಶತಮಾನದ ಹಿನ್ನೆಲೆಯಲ್ಲಿ ಮಾಜಿ ಸಚಿವರು ಬಿ. ಶ್ರೀರಾಮುಲು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಪ್ರಯಾಣ ವೇಳೆಯಲ್ಲಿ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವಿದ್ಯುತ್ ಸಮಸ್ಯೆ ವಿದ್ಯಾಬ್ಯಾಸಕ್ಕೆ ತೊಂದರೆ ಯಾಗಿದ್ದು, ಇದ್ದರಿಂದ ಬರುವ ವಾರ್ಷಿಕ ಪರೀಕ್ಷೆ ಪೂರಕ ವಿದ್ಯಾಬ್ಯಾಸಕ್ಕೆ ತೊಂದರೆ ಎಡೆಮಾಡಿದೆ.ದೇಶದಲ್ಲಿ ಟೆಕ್ನಲಾಜಿ ಮುಂದುವರಿದಿದೆ. ರಾಜ್ಯ ಸರಕಾರ ಗಂಭಿರ ತೆಗೆದು ಕೊಳ್ಳಬೇಕು ಎಂದು ಸರಕಾರ ಘಮನ ಸೆಳೆಯುವ ಕೆಲಸ ಮಾಡುವೆ ಎಂದರು.
ಮುಂಬರುವ ಲೋಕ ಸಭೆಗೆ ಚುನವಾಣೆಯಲ್ಲಿ ಅಕಾಕ್ಷಿ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಪಾರ್ಟಿ ಯಾವ ತಿರ್ಮಾನ ತೆಗೆದು ಕೊಂಡಿಲ್ಲ, ಬಾಳಷ್ಷು ಅಕಾಂಕ್ಷಿಗಳು ಇದ್ದು, ನಾನು ಒಬ್ಬ ಆಕಾಂಕ್ಷಿ ಎಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವಕಾಶ ಕೊಟ್ರೆ ಸ್ಪರ್ಧಿಸುತ್ತೇನೆ ಇಲ್ಲದಿದ್ದರೆ ಪರ ಕೆಲಸ ಮಾಡುವೆ ಎಂದರು. ಮತ್ತು ದೇಶದಲ್ಲಿ 370, ಹಾಗೂ ಮಿತ್ರ ಪಕ್ಷಗಳು ಸೇರಿ 400 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಖಚಿತ ಹಾಗೂ ಭಾರತವನ್ನು ವಿಶ್ವ ಮಟ್ಟದಲ್ಲಿ ಹಗಲಿರಲು ಮೋದಿಯವರನ್ನು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ ಅಂತಹ ನಾಯಕ ನಮ್ಮೆಲ್ಲರಿಗೂ ದೊರೆತಿರುವುದು ಸಂತಸದ ವಿಚಾರ ಎಂದರು.
ಈ ವೇಳೆ ಪಕ್ಷದ ಮುಖಂಡರು, ಹಾಗೂ ಕಾರ್ಯಕರ್ತರು ಜೊತೆಯಲ್ಲಿದ್ದರು.


