ಕುಂದಾಪುರ : ಖ್ಯಾತ ನಟ ರಿಷಬ್ ಶೆಟ್ಟಿ ನಟಿಸಿ ಮೊದಲ ಚಾಪ್ಟರ್ ಹಿಟ್ ಆದ ಹಿನ್ನೆಲೆ ಕಾಂತಾರ ಚಾಪ್ಟರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು ಈ ಹಿನ್ನೆಲೆ ಶೂಟಿಂಗ್ ಗಾಗಿ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿದ್ದು , 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕರಾವಳಿ ಭಾಗದ ವಿವಿಧೆಡೆ ಚಿತ್ರೀಕರಣ ನಡೆಯುತ್ತಿದ್ದು ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಸಮೀಪ ಜಡ್ಕಳ್ ಬಳಿ ಪಲ್ಟಿಯಾಗಿದ್ದು ಬಸ್ ನಲ್ಲಿ ಹಲವು ಮಂದಿ ಕಲಾವಿದರು ಇದ್ದರೆಂದು ತಿಳಿದುಬಂದಿದೆ.ಇದರಲ್ಲಿ 20 ಜೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದದ್ದು ಅದರಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿದ್ದು , ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


